ಸಾರ್ಥಕ ಬದುಕಿನ ಸುಂದರ ಕ್ಷಣಗಳು...
ಅತ್ತೆ ಮಾವ,ಅವರ ಮಕ್ಕಳು ಎಂದರೆ ನನ್ನ ಜೊತೆಗಾರರು ಇವರೊಟ್ಟಿಗೆ ಕೂನೂರಿಗೆ
ಹೋಗಿದ್ದೆ. ನಮ್ಮ ತಂಗುಧಾಮ ಗುಡ್ಡದ ಮೇಲೆ ಇತ್ತು. ಅಲ್ಲಿಂದ ಪೂರ್ತಿ ಊರು ನೋಡಿ ನಂಬಲಾರದ
ಸೃಷ್ಠಿಯ ಸೊಬಗನ್ನು ಕಣ್ಣು ತುಂಬಿಸಿದಷ್ಟು ಸಾಲದು ಎಂದು ಅನ್ನಿಸಿದಂತು ನಿಜ ಅದರೊಂದಿಗೆ ಅಲ್ಲಿ
ಕೊರೆಯುವ ಚಳಿ!
ಕೂನೂರಿನ ಚುಕುಬುಕು ಬಂಡಿಯಲ್ಲಿ ಕೂತು, ಅಲ್ಲಿ ಇಲ್ಲಿ ತಿರುಗಿ ಊಟವಾದ ನಂತರ ನಾವೆಲ್ಲರೂ ನಿದ್ರಾ ದೇವತೆಗೆ ಶರಣಾದೆವು. ಮರುದಿನ
ನನ್ನ ಅತ್ತೆ ಎಂದಿನಂತೆ ನಾಲ್ಕುವರೆಗೆ ಎದ್ದಾಗ ನನಗೂ ಎಚ್ಚರ ಆಯಿತು. ಕೊರೆಯುವ ಚಳಿ ಇದ್ದರೂ
ಅತ್ತೆ ಎದ್ದದ್ದು ನನ್ನನ್ನು ಏಳಲು ಪ್ರೇರೇಪಿತು. ನಾನು ಅವರೊಟ್ಟಿಗೆ ಸೇರಿಕೊಂಡೆ. ನೀರು
ಬಿಸಿಯಾಗುವ ಹೊತ್ತಿಗೆ,ಅತ್ತೆ ಬಟ್ಟೆ - ಮತ್ತಿತರ ವಸ್ತುಗಳನ್ನು ಅಣಿಮಾಡಿದರು.
ಅತ್ತೆ ಫ್ಲಾಸ್ಕ್ ಅನ್ನು ಒಂದು ಕೈಚೀಲಕ್ಕೆ ಹಾಕಿಕೊಂಡರು. ಇಬ್ಬರು ಹೊರಟೆವು. ಗುಡ್ಡೆಯ
ಮತ್ತೊಂದು ಬದಿ ಸಂಪೂರ್ಣ ಮಂಜಿನಿಂದ ಕೂಡಿದ್ದ ಅದ್ಭುತ ನೋಟ. ಬೆಳ್ಳಂಬೆಳಗ್ಗೆ ಆದ ಕಾರಣ
ದಿನಪತ್ರಿಕೆಯ ಜೋಡಿಸುವವರು, ವಾಹನ ಇಲ್ಲದ ಕಾಲಿ ರಸ್ತೆಗಳು, ಹೂ ಮಾರುವವರು, ನಡಿಗೆಗೆಂದು ಬಂದವರು ಹೀಗೆ ನಿಷಬ್ದವಾದ ವಾತಾವರಣ ಇತ್ತು. ಅತ್ತೆ
ಅಲ್ಲೆ ಒಂದು ಅಂಗಡಿಗೆ ಹೋಗಿ ಒಳ್ಳೆಯ ಚಹಾ ಎಲ್ಲಿ ಸಿಗುವುದೆಂದು ವಿಚಾರಿಸಿದರು. ಮುಖ್ಯ ರಸ್ತೆ
ಕಳೆದು, ಯಾವುದೋ ಕಿರು ದಾರಿ ಹಿಡಿದು ಮುಂದೆ ನಡೆದೆವು. ಅಲ್ಲಿ ಚಹಾ ಕುಡಿಯುತ್ತಾ ನಿಂತವರ ಸಂಖೆ
ನೋಡಿಯೇ ನಾವು ಸರಿಯಾಗಿ ತಲುಪಿದೆವು ಎಂಬುದು ಖಾತ್ರಿಯಾಯಿತು.ಚಹಾ ತುಂಬಿಸಿಕೊಂಡು
ಹಿಂತಿರುಗಿದೆವು. ಮಾವ ಮಕ್ಕಳು ಮಲಗಿಯೇ ಇದ್ದರು.ಅತ್ತೆ ಅವರೆಲ್ಲ ಏಳುವ ಹೊತ್ತಿಗೆ ಬಿಸಿ ನೀರು
ತಯಾರು ಮಾಡಿಟ್ಟಿದ್ದರು. ಮಾವ ಎದ್ದು ಮುಖ ತೊಳೆದು ಬಂದವರು ಹೇಳಿದರು "ಚಳಿಗೆ ಬಿಸಿ ಬಿಸಿ
ನೀರಿನಲ್ಲಿ ಮುಖ ತೊಳೆದರೆ ಸಮಾಧಾನನಪ್ಪ " ಎಂದು ಹೇಳಿಕೊಂಡು ಬಂದರು. ಹಾಗೆ ಬಿಸಿ ಬಿಸಿ
ಚಹಾ ಇದ್ದರಂತೂ ಎಂದು ಹೇಳಿ ನೀರು ಕುಡಿದು ಕೂತರು ಅಷ್ಟರಲ್ಲಿ ನನ್ನ ಜೊತೆಗಾರರು ಎದ್ದು ಮುಖ ತೊಳೆದು ಬಂದರು.ಅತ್ತೆ ಎಲ್ಲರಿಗೂ ಬಿಸಿ ಬಿಸಿ ಚಹಾ ಲೋಟಕ್ಕೆ ಹಾಕಿ ಅವರೇ ಮಾಡಿ ತಂದಿದ್ದ ಬಿಸ್ಕತ್ತುಗಳನ್ನು ಬಟ್ಟಲಿಗೆ ಹಾಕಿದರು. ನಾವೆಲ್ಲ ಕೊರೆಯುವ ಚಳಿಗೆ ಬೆಚ್ಚಗೆ ಕೂತು ಬಿಸಿ
ಬಿಸಿ ಚಹಾ ಕುಡಿದೆವು. ಅದೆಷ್ಟು ಚಂದ ಅನಿಸಿತ್ತು.
ಇದೇ ರೀತಿ ಅನಿಸಿದ್ದು ವಿದ್ಯಾರ್ಥಿ
ನಿಲಯದ ಗೆಳತಿ, ನಾನು
ಸ್ನಾನ ಮುಗಿಸಿ ಬಂದಾಗ ಇಸ್ತ್ರಿ
ಹಾಕಲು ತೆಗದಿಟ್ಟ ಬಟ್ಟೆಗೆ ಆಕೆಯೆ ಇಸ್ತ್ರಿ ಹಾಕಿ ಇಟ್ಟಾಗ, ಒಬ್ಬಳೇ ಇರಬೇಕಾದ ದಿನ , ಸಂಜೆ
ಮನೆಗೆ ಬಂದಾಗ ಫ್ಲಾಸ್ಕಿನಲ್ಲಿ ಕಾಫಿ ಇದೆ ಎಂಬ ಸಂದೇಶ ಹೊತ್ತ ಪುಟ್ಟ ಚೀಟಿ ಕಂಡಾಗ....
ನಾವು ನಮ್ಮವರಿಗಾಗಿ ಹೀಗಿರುವ ಸಣ್ಣ ಪುಟ್ಟ ಅಚ್ಚರಿಗಳನ್ನು ನೀಡುವುದು ನಮ್ಮ ಜೀವನದಲ್ಲಿ ಮರೆಯಲಾಗದ ಸುಂದರ ನೆನಪುಗಳನ್ನು
ಜೋಪಾನವಾಗಿ ಹೆಕ್ಕಿ ಇಡುವಂತೆ ಮಾಡುತ್ತದೆ.
ಇಂಥಹ
ಪುಟ್ಟ ಪುಟ್ಟ ಖುಷಿಯೇ ಇರಬೇಕು ಸಾರ್ಥಕ ಬದುಕಿನ ಸುಂದರ ಕ್ಷಣಗಳು...
ಭಾರೀ ಲಾಯಕ್ಕು ಬರ್ದಿದ್ದಿ....
ReplyDeleteನೆನಪು...ಇದ್ದದ್ದು ಸಾಕು....😘🤗🌈😇
ಎಂಥಾ ಚಳಿ ..ಎರಡು ದಿವಸಕ್ಕೆ ಅಲ್ಲಿಂದ ಓಡಿ ಬಂದದು..😁
ಅಬ್ಬಾ!!!!!ಚಳಿಯೇ....😻🙈
ಆಗ್ಲಿ ಅತ್ತೆ . ಅಲ್ಲಿ ಕುಡಿದ ಚಹಾ, ವೆಂಕಿ ರೆಸ್ಟೋರೆಂಟ್ನಲ್ಲಿ ಊಟ ಎಲ್ಲವೂ ನೆನಪಿದೆ...♥️
DeleteOK
Delete