ಅಜ್ಜಿ ತನ್ನ ಪುಳ್ಳಿ ಜೊತೆಗೆ ಬೆಸೆದುಕೊಂಡ ರೀತಿ ಜೀವ ಸೆಲೆ ಎಂದರೆ ಏನು ಎಂಬುದನ್ನು ಅದರ ಸೌಂದರ್ಯವನ್ನು ಅಚ್ಚುಕಟ್ಟಾಗಿ ನಿರೂಪಿಸಿದಂತು ಸ್ಪಷ್ಟ!
ಕೆ ಲವು ಪರಿಮಳ ಗತಿಸಿದ ಘಟನೆಗಳನ್ನು ಮತ್ತೊಮ್ಮೆ ನಮ್ಮ ಮುಂದೆ ಕಟ್ಟಿಕೊಡುತ್ತದೆ. ಪತಂಜಲಿ ಬಟ್ಟೆ ಸಾಬೂನಿನ ಪರಿಮಳ ವಿದ್ಯಾರ್ಥಿ ನಿಲಯದಲ್ಲಿ ಬಟ್ಟೆ ಒಗಿಯುವಾಗಾ ನಮ್ಮ ಸ್ನೇಹಿತೆಯರನ್ನು ಗೊಳಾಡಿಸಿದ ದಿನಗಳನ್ನು , ಪೊಂಡ್ಸ್ ಕ್ರೀಮ್ ಪರಿಮಳ , ಅಮ್ಮ ನಮಗೆ ಚಳಿಗಾಲದಲ್ಲಿ ಕ್ರೀಮ್ ಹಾಕಿ , ಬೆಚ್ಚೆಗೆ ಇರಲು ಕಾಲು ಚೀಲ ಹಾಕಿಸಿ , ಟೊಪ್ಪಿ ಹಾಕಿಸಿ ಕೂರಿಸಿತಿದ್ದದ್ದನ್ನು , ಅಷ್ಟೆ ಅಲ್ಲ ದಾರಿಯಲ್ಲಿ ಎಲ್ಲೋ ಕೊಳೆತ ಮೊಟ್ಟೆಯ ವಾಸನೆಯಂತೂ ಗಡಗಡ ನಡುಗುತ್ತ ನಿಲ್ಲುತ್ತಿದ ರಸಾಯನ ಶಾಸ್ತ್ರದ ಪ್ರಯೋಗಾಲಯ ಚಿತ್ರಿಸಿ ಸಣ್ಣಕೆ ಕಂಪಿಸಿದ್ದು ಉಂಟು! ಪರಿಶುದ್ಧ ಕೊಬ್ಬರಿ ಎಣ್ಣೆಯ ಪರಿಮಳವಂತೂ ನೆನಪಿಸುವುದು ಸುಬ್ಬಿ ಅಜ್ಜಿಯನ್ನು . ಸರಿಯಾಗಿ ಹತ್ತು ಗಂಟೆಗೆ ಸಣ್ಣ ಡಬ್ಬಿ ಕೊಬ್ಬರಿ ಎಣ್ಣೆಯನ್ನು , ಪುಟ್ಟ ಬಟ್ಟೆಯ ಚೀಲ ಅದರಲ್ಲಿ ಆಕೆ ಹಣಿಗೆ , ಮತ್ತೊಂದು ಡಬ್ಬಿ , ಅದರಲ್ಲಿ ಬಟ್ಟು , ಇವನ್ನೆಲ್ಲ ತೆಗೆದುಕೊಂಡು ಮನೆಯ ಜಗುಲಿಯಲ್ಲಿ ಕೂತು ೨ ಬಿಂದು ಎಣ್ಣೆಯನ್ನು ನೆತ್ತಿಗೆ ಹಾಕಿ ಜಡುಕು ತೆಗೆದು ಸಣ್ಣ ತುರುಬು ಕಟ್ಟಿ , ಬಿದ್ದ ತಲೆ ಕಸವನೆಲ್ಲ ತೆಂಗಿನ ಬುಡಕ್ಕೆ ಹಾಕಿ ಕೈಯೊಂದನ್ನು ಹಣೆಗೆ ಇಟ್ಟು ದಾರಿಯನ್ನು ಯಾರನ್ನೋ ನಿರೀಕ್ಷಿಸುವಂತೆ ನೋಡುತ್ತಾಳೆ. ಯಾರು ಕಾಣದಿದ್ದಾಗ ಒಳಗೆ ಹೋಗುವಳು. ಅಷ್ಟರಲ್ಲಿ ಪುಳ್ಳಿ ಬಂದು ತಿನ್ನಲು ಏನಾದರೂ ಕೊಡು ಎಂದು ಕೇಳಿದಾಗ ಮನೆ ಬಿಟ್ಟು ಎಲ್ಲಿಯೂ ಹೋಗದ ಸ...