Posts

Showing posts with the label Kannada Write ups

ಅಕ್ಕಿ ಕಾಳಿನ ಮೇಲೆ ಹೆಸರು ಬರೆದಳೆ ಸೀತು...?!

Image
ಉಣಗಲು ದಾಟಿ 5 ನಿಮಿಷ ನಡೆದುಕೊಂಡು ಹೋಗಬೇಕು ಅವನ ಅಜ್ಜನ ಮನೆ ತಲುಪಲು. ದಾರಿಯುದ್ದಕ್ಕೂ ಅರಳಿ ನಿಂತ ತರಾವರಿ ದಾಸವಾಳದ ಹೂಗಳು, ಅದರೊಂದಿಗೆ ಅಲ್ಲಿ ಅಲ್ಲಿ ಇರುವ ಗಂಧಸಾಲೆಯ ಪರಿಮಳ, ಹಕ್ಕಿಯ ಕೂಗು, ಅದರೊಂದಿಗೆ ಬರುವ ಬಾಲ್ಯದ ನೆನಪುಗಳು… ಇವನ್ನೆಲ್ಲ ಚಿಂತೆಗಳನ್ನು ಮರೆಸಿ ಮನೆ ತಲುಪುವಷ್ಟರಲ್ಲಿ ತುಸು ಸಮಾಧಾನ ಕೊಡುತ್ತಿತ್ತು. ಮನೆಗೆ ಹೋದರೆ ಅಲ್ಲಿ ಈಗ ಇರುವುದು ಅವನ ಸೀತು ಮಾತ್ರ. ಅವನು ಆರು ತಿಂಗಳ ಮಗುವಾಗಿದ್ದಾಗಿನಿಂದ ಅವನನ್ನು ನೋಡಿಕೊಂಡ ದೂರದ ಅತ್ತೆಯೇ ಹೌದು. ಮನೆ ತಲುಪಿದ ಕೂಡಲೇ ಬಿಸಿ ನೀರಿನ ಸ್ನಾನ, 100 ವರ್ಷ ಹಳೆಯ ಈ ಬಚ್ಚಲು ಮನೆಯಲ್ಲಿ ಸದಾಕಾಲ ಬಿಸಿ ನೀರಿನಿಂದ ತುಂಬಿರುವ ಪಳಪಳ ಹೊಳೆಯುವ ಹಂಡೆ, ಮಂದ ಬೆಳಕು, ಮೈ ಒರೆಸಿಕೊಳ್ಳಲು ಅವನ ಸೀತು ಕೊಡುತ್ತಿದ್ದ ಪರಿಮಳದ ಬೈರಾಸು—ಇವೆಲ್ಲ ಕೊಡುತ್ತಿದ್ದ ಕುಶಿ, ತನ್ನ ಪೇಟೆಯ ಮನೆಯ ಆಧುನಿಕ ತಂತ್ರಜ್ಞಾನದ ಬಚ್ಚಲು ಮನೆ ಕೊಡಲು ಸಾಧ್ಯವಿಲ್ಲ ಎಂದು ಅವನಿಗೆ ಅನಿಸುತ್ತಿತ್ತು. ಪ್ರತಿ 2/3 ತಿಂಗಳಿಗೊಮ್ಮೆ ಅಜ್ಜನ ಮನೆಗೆ ಬಂದು, ಅವನು ತೋಟದ ಕೆಲಸ ನೋಡಿಕೊಳ್ಳುತ್ತಿದ್ದ. ಪತ್ನಿ ಹಾಗೂ ಸೀತು ಹಲಸಿನ ಹಣ್ಣು ಕೊರೆದು, ಸೊಳೆಗಳನ್ನು ಬೇರ್ಪಡಿಸುವುದು, ಗೇರುಬೀಜ ಹುರಿಯುವುದು, ಪುನರ್ಪುಳಿ ಕೊಚ್ಚಿ ಬಿಸಿಲಿನಲ್ಲಿ ಒಣಗಿಸುವುದು, ಹಪ್ಪಳ, ಸಂಡಿಗೆ, ಬೆರಟ್ಟಿ, ಮಾಂಬ್ಳ, ಚಕ್ಕುಲಿ ಮುಂತಾದವುಗಳನ್ನು ಮಾಡುವುದು. ಸೀತುವಿಗೆ ಇದೀಗ 70 ವರ್ಷ ಕಳೆದಿದೆ, ಆದರೆ ಇನ್ನೂ 40–45ರ ಹಾಗೆ ಕಾಣುತ್...

#48, ಸಿರಿ ದೇವ ಮತ್ತು ಗಾಜಿನ ಜಾಡಿಗಳು

Image
ಅದು ಮಬ್ಬುಗತ್ತಲೆಯ ಕೋಣೆ. ಇಡೀ ವಿದ್ಯಾರ್ಥಿ ನಿಲಯದಲ್ಲಿ ಹೆಚ್ಚಿನ ಸೌಲಭ್ಯ ಸಿಗುವ ಏಕೈಕ ಕೋಣೆ #48. ನನ್ನ ಅದೃಷ್ಟ—ಅಲ್ಲಿ ಸೇರಿಕೊಂಡೆ. ಅಲ್ಲಿ ಮೊದಲೇ ಬಿಡಾರ ಹೂಡಿದ್ದ ಸಿರಿ ದೇವಿ ನನಗೆ ಕೋಣೆಯ ವಿಶೇಷತೆಗಳನ್ನು ಹೇಳಿದಳು. ಕೋಣೆಯ ಒಂದು ಮೂಲೆ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿತ್ತು. ಹಾಗಾಗಿ ಅಲ್ಲಿ ಯಾರೂ ಜಾಂಡ ಊರುವ ಹಾಗಿರಲಿಲ್ಲ. ಇದರಿಂದ ಅಲ್ಲಿ ಇಬ್ಬರಿಗೆ ಮಾತ್ರ ಅವಕಾಶ—ಇದು ಮತ್ತಾವ ಕೋಣೆಯಲ್ಲೂ ಸಿಗದು. ಇನ್ನು ಹೀಗೆ ಮಳೆಯ ನೀರಿನಿಂದ ತುಕ್ಕು ಹಿಡಿದ ಕಂಬಿಯ ಕಿಟಕಿಯನ್ನು ಸ್ಲೈಡಿಂಗ್ ವಿಂಡೋವಾಗಿ ಮಾರ್ಪಾಟು ಮಾಡಿದ್ದರು. ಯಾವುದೋ ಖಾಸಗಿ ದ್ವೀಪದ, ಗಗನಚುಂಬಿ ವಸತಿಗೃಹದ ತುದಿಯ ಕೋಣೆಯ ಕಿಟಕಿಯಂತೆ ನಮಗೆ ಅನ್ನಿಸುತ್ತಿತ್ತು. ಅದಕ್ಕೆ ಕಾರಣ—ಈ ಕಿಟಕಿಯನ್ನು ತಳ್ಳಿದಾಗ ಆಕಾಶ, ಸಂಪೂರ್ಣ ಹಸಿರು ಮರಗಳು, ಪಕ್ಷಿಗಳು, ಅಳಿಲುಗಳು ಇವೆಲ್ಲ ಕಾಣಿಸುತ್ತಿದ್ದವು. ಮಾರ್ಗ ಬದಿಯಾಗಿರದ ಕಾರಣ ವಾಹನದ ಸದ್ದುಗದ್ದಲವೂ ಇರಲಿಲ್ಲ. ಒಟ್ಟಿನಲ್ಲಿ ನಮ್ಮ ಇಂದ್ರಲೋಕವೇ ಇದಾಗಿತ್ತು. ಸದಾ ನಗು-ಕುಶಿ; ಯಾವ ಚಿಂತೆಯೂ ಇಲ್ಲಿ ಇರಲಿಲ್ಲ. ಬಂದರೂ ಅವು ನೀರಿನ ಮೇಲಿನ ಗುಳ್ಳೆಗಳಂತೆ. ಬೆಳ್ಳಂಬೆಳಗ್ಗೆ ಎದ್ದು ಬಿಸಿನೀರು ಮಾಡುವ ಕೆಲಸ ನನಗಾದರೆ, ಅಂದಿನ ಧರಿಸುವ ಬಟ್ಟೆಗಳ ಇಸ್ತ್ರಿ ಕೆಲಸ ಸಿರಿಯದ್ದು. ಇನ್ನು ಮೆಸ್ಸಿನಲ್ಲಿ ಇಬ್ಬರಿಗೂ ತಿಂಡಿ ಬಡಿಸಿ ತರುವ ಕೆಲಸ ನನ್ನದು, ಮತ್ತು ನೀರಿನ ಕುಪ್ಪಿ ತುಂಬಿಸುವ ಕೆಲಸ ಸಿರಿಯದ್ದು. ಅಷ್ಟೇ ಅಲ್ಲ—ಬಸ್ಸಿನಲ್ಲಿ...

ಸಂತೃಪ್ತಿ

Image
ಜೋಯಿಸರು ಜೇನು ಸಂಶೋಧನ ಕೇಂದ್ರದಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಜ್ಜಯಿನಿ ಇಂದ ಮೂಡಿಗೆರೆವರೆಗೆ ಅನೇಕ ರಾಜ್ಯಗಳಲ್ಲಿ ಸೇವೆಸಲ್ಲಿಸಿದ್ದರಲ್ಲದೆ ಅಲ್ಲಿಯ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಜೇನು ಉತ್ಪಾದನೆಗೆ ನೂರು ಲೀಟರ್ ಗುರಿಯೆಂದು ನೀಡಿದ್ದರೆ ಜೋಯಿಸರು ನೂರೈವತ್ತು ಇನ್ನೂರು ವರೆಗೂ ತಲುಪುತ್ತಿದ್ದರು. ಸರಕಾರಿ ಕೆಲಸವಾದರೂ ಬೆಳ್ಳಂ ಬೆಳಗ್ಗೆ ನಾಕು ಗಂಟೆಯ ಚಳಿಯನ್ನು ಲೆಕ್ಕಿಸದೆ , ತಣ್ಣೀರು ಸ್ನಾನ , ದೇವರ ಪೂಜೆ ಮಾಡಿ, ಜೇನು ಪೆಟ್ಟಿಗೆಗಳನ್ನು ಸರಿಯಾದ ಸ್ಥಳಕ್ಕೆ ರವಾನಿಸುವ ಕೆಲಸವನ್ನು ತಾವೇ ಖುದ್ದಾಗಿ ನಿಂತು ಮಾಡಿಸುತ್ತಿದ್ದರು. ಅವರ ಈ ನಿಸ್ವಾರ್ಥ ಸೇವೆಯಿಂದ ಅಲ್ಲಿನ ಸೊಸೈಟಿಗೆ ಒಳ್ಳೆಯ ಹೆಸರು ಬರುತ್ತಿತ್ತು ಅಲ್ಲದೆ ವರ್ಷದ ಲಾಭದಲ್ಲಿ ಸಣ್ಣ ಒಂದು ಭಾಗವು ಇನಾಮಾಗಿ ಎಲ್ಲಾ ಕೆಲಸಗಾರರಿಗೆ ಲಭಿಸುತ್ತಿತ್ತು.ಹೀಗೆ ಕಾಯಕವೇ ಕೈಲಾಸ ಎಂದು ಜೋಯಿಸರು ನಂಬಿದ್ದರು. ಅವರಿಗೆ ನಾಗಾಲ್ಯಾಂಡ್ಗೆ ವರ್ಗವಾದಗಲೂ ಹೋಗಲು ತಯಾರಿದ್ದರು  ಅಲ್ಲದೆ  ಅದನ್ನು ಪತ್ನಿಯೊಂದಿಗೆ ಹೇಳಿ ಬೇಕಾಗುವ ಸಿದ್ಧತೆ ಮಾಡಿಕೊಳ್ಳಲು ಸೂಚನೆ ಕೊಟ್ಟರು.   ಜೋಯಿಸರ ಮಡದಿ ತ್ರಿಪುರ ಸುಂದರಿ ಅಮ್ಮನವರು. ಹೆಸರಿಗೆ ತಕ್ಕಂತೆ ಬಹಳ ಲಕ್ಷಣವಾಗಿದ್ದರು. ಆಕೆ ಬಹಳ ಮುಂದಾಲೋಚನೆ ಇಂದ ಯೋಚಿಸುವವರು. ನಾಗಾಲ್ಯಾಂಡ್ಗೆ ಹೋಗಲು ನಾಲ್ಕು ಜನ ಮಕ್ಕಳನ್ನು ಕಟ್ಟಿಕೊಂಡೇ ಹೋಗಬೇಕು , ಅಲ್ಲಿ ಶಾಲೆ ಹೇಗೋ ಏನೋ ? ಇನ್ನೂ ಊಟ...

ಸಾರ್ಥಕ ಬದುಕಿನ ಸುಂದರ ಕ್ಷಣಗಳು...

Image
ಅತ್ತೆ ಮಾವ , ಅವರ ಮಕ್ಕಳು ಎಂದರೆ ನನ್ನ ಜೊತೆಗಾರರು ಇವರೊಟ್ಟಿಗೆ ಕೂನೂರಿಗೆ ಹೋಗಿದ್ದೆ. ನಮ್ಮ ತಂಗುಧಾಮ ಗುಡ್ಡದ ಮೇಲೆ ಇತ್ತು. ಅಲ್ಲಿಂದ ಪೂರ್ತಿ ಊರು ನೋಡಿ ನಂಬಲಾರದ ಸೃಷ್ಠಿಯ ಸೊಬಗನ್ನು ಕಣ್ಣು ತುಂಬಿಸಿದಷ್ಟು ಸಾಲದು ಎಂದು ಅನ್ನಿಸಿದಂತು ನಿಜ ಅದರೊಂದಿಗೆ ಅಲ್ಲಿ ಕೊರೆಯುವ ಚಳಿ!     ಕೂನೂರಿನ ಚುಕುಬುಕು ಬಂಡಿಯಲ್ಲಿ ಕೂತು , ಅಲ್ಲಿ ಇಲ್ಲಿ ತಿರುಗಿ ಊಟವಾದ ನಂತರ ನಾವೆಲ್ಲರೂ ನಿದ್ರಾ ದೇವತೆಗೆ ಶರಣಾದೆವು. ಮರುದಿನ ನನ್ನ ಅತ್ತೆ ಎಂದಿನಂತೆ ನಾಲ್ಕುವರೆಗೆ ಎದ್ದಾಗ ನನಗೂ ಎಚ್ಚರ ಆಯಿತು. ಕೊರೆಯುವ ಚಳಿ ಇದ್ದರೂ ಅತ್ತೆ ಎದ್ದದ್ದು ನನ್ನನ್ನು ಏಳಲು ಪ್ರೇರೇಪಿತು. ನಾನು ಅವರೊಟ್ಟಿಗೆ ಸೇರಿಕೊಂಡೆ. ನೀರು ಬಿಸಿಯಾಗುವ ಹೊತ್ತಿಗೆ , ಅತ್ತೆ   ಬಟ್ಟೆ - ಮತ್ತಿತರ ವಸ್ತುಗಳನ್ನು ಅಣಿಮಾಡಿದರು.   ಅತ್ತೆ ಫ್ಲಾಸ್ಕ್ ಅನ್ನು ಒಂದು ಕೈಚೀಲಕ್ಕೆ ಹಾಕಿಕೊಂಡರು. ಇಬ್ಬರು ಹೊರಟೆವು. ಗುಡ್ಡೆಯ ಮತ್ತೊಂದು ಬದಿ ಸಂಪೂರ್ಣ ಮಂಜಿನಿಂದ ಕೂಡಿದ್ದ ಅದ್ಭುತ ನೋಟ. ಬೆಳ್ಳಂಬೆಳಗ್ಗೆ ಆದ ಕಾರಣ ದಿನಪತ್ರಿಕೆಯ ಜೋಡಿಸುವವರು , ವಾಹನ ಇಲ್ಲದ ಕಾಲಿ ರಸ್ತೆಗಳು , ಹೂ ಮಾರುವವರು , ನಡಿಗೆಗೆಂದು ಬಂದವರು ಹೀಗೆ ನಿಷಬ್ದವಾದ ವಾತಾವರಣ ಇತ್ತು. ಅತ್ತೆ ಅಲ್ಲೆ ಒಂದು ಅಂಗಡಿಗೆ ಹೋಗಿ ಒಳ್ಳೆಯ ಚಹಾ ಎಲ್ಲಿ ಸಿಗುವುದೆಂದು ವಿಚಾರಿಸಿದರು. ಮುಖ್ಯ ರಸ್ತೆ ಕಳೆದು , ಯಾವುದೋ ಕಿರು ದಾರಿ ಹಿಡಿದು ಮುಂದೆ ನಡೆದೆವು. ಅಲ್ಲಿ ಚಹಾ ಕುಡಿಯುತ್ತಾ ...

ಅಜ್ಜಿ ತನ್ನ ಪುಳ್ಳಿ ಜೊತೆಗೆ ಬೆಸೆದುಕೊಂಡ ರೀತಿ ಜೀವ ಸೆಲೆ ಎಂದರೆ ಏನು ಎಂಬುದನ್ನು ಅದರ ಸೌಂದರ್ಯವನ್ನು ಅಚ್ಚುಕಟ್ಟಾಗಿ ನಿರೂಪಿಸಿದಂತು ಸ್ಪಷ್ಟ!

Image
ಕೆ ಲವು ಪರಿಮಳ ಗತಿಸಿದ ಘಟನೆಗಳನ್ನು ಮತ್ತೊಮ್ಮೆ   ನಮ್ಮ ಮುಂದೆ ಕಟ್ಟಿಕೊಡುತ್ತದೆ. ಪತಂಜಲಿ ಬಟ್ಟೆ ಸಾಬೂನಿನ ಪರಿಮಳ ವಿದ್ಯಾರ್ಥಿ ನಿಲಯದಲ್ಲಿ ಬಟ್ಟೆ ಒಗಿಯುವಾಗಾ ನಮ್ಮ   ಸ್ನೇಹಿತೆಯರನ್ನು ಗೊಳಾಡಿಸಿದ ದಿನಗಳನ್ನು , ಪೊಂಡ್ಸ್ ಕ್ರೀಮ್ ಪರಿಮಳ , ಅಮ್ಮ ನಮಗೆ ಚಳಿಗಾಲದಲ್ಲಿ ಕ್ರೀಮ್ ಹಾಕಿ , ಬೆಚ್ಚೆಗೆ ಇರಲು ಕಾಲು ಚೀಲ ಹಾಕಿಸಿ , ಟೊಪ್ಪಿ ಹಾಕಿಸಿ ಕೂರಿಸಿತಿದ್ದದ್ದನ್ನು , ಅಷ್ಟೆ ಅಲ್ಲ ದಾರಿಯಲ್ಲಿ ಎಲ್ಲೋ ಕೊಳೆತ ಮೊಟ್ಟೆಯ ವಾಸನೆಯಂತೂ ಗಡಗಡ ನಡುಗುತ್ತ ನಿಲ್ಲುತ್ತಿದ ರಸಾಯನ ಶಾಸ್ತ್ರದ ಪ್ರಯೋಗಾಲಯ   ಚಿತ್ರಿಸಿ ಸಣ್ಣಕೆ ಕಂಪಿಸಿದ್ದು ಉಂಟು! ಪರಿಶುದ್ಧ ಕೊಬ್ಬರಿ ಎಣ್ಣೆಯ ಪರಿಮಳವಂತೂ ನೆನಪಿಸುವುದು ಸುಬ್ಬಿ ಅಜ್ಜಿಯನ್ನು .   ಸರಿಯಾಗಿ ಹತ್ತು ಗಂಟೆಗೆ ಸಣ್ಣ ಡಬ್ಬಿ ಕೊಬ್ಬರಿ ಎಣ್ಣೆಯನ್ನು , ಪುಟ್ಟ ಬಟ್ಟೆಯ ಚೀಲ ಅದರಲ್ಲಿ ಆಕೆ ಹಣಿಗೆ , ಮತ್ತೊಂದು ಡಬ್ಬಿ , ಅದರಲ್ಲಿ ಬಟ್ಟು , ಇವನ್ನೆಲ್ಲ ತೆಗೆದುಕೊಂಡು ಮನೆಯ ಜಗುಲಿಯಲ್ಲಿ ಕೂತು ೨ ಬಿಂದು ಎಣ್ಣೆಯನ್ನು ನೆತ್ತಿಗೆ ಹಾಕಿ   ಜಡುಕು ತೆಗೆದು ಸಣ್ಣ ತುರುಬು ಕಟ್ಟಿ , ಬಿದ್ದ ತಲೆ ಕಸವನೆಲ್ಲ ತೆಂಗಿನ ಬುಡಕ್ಕೆ ಹಾಕಿ ಕೈಯೊಂದನ್ನು ಹಣೆಗೆ ಇಟ್ಟು ದಾರಿಯನ್ನು ಯಾರನ್ನೋ ನಿರೀಕ್ಷಿಸುವಂತೆ   ನೋಡುತ್ತಾಳೆ. ಯಾರು ಕಾಣದಿದ್ದಾಗ ಒಳಗೆ ಹೋಗುವಳು. ಅಷ್ಟರಲ್ಲಿ ಪುಳ್ಳಿ ಬಂದು ತಿನ್ನಲು ಏನಾದರೂ ಕೊಡು ಎಂದು ಕೇಳಿದಾಗ ಮನೆ ಬಿಟ್ಟು ಎಲ್ಲಿಯೂ ಹೋಗದ ಸ...

ಮಹಾನಗರಿಗೆ ಮರುಳಿದ ಮತ್ತೆಯೂ ಮುಸ್ಸಂಜೆ ದೀಪದ ಎದುರು ಕೂತಾಗ ಕಾಡುವ ನೆನಪುಗಳು...

Image
ಹೊಟ್ಟೆಪಡಿಗಾಗಿ ಮಹಾನಗರಿಗಳಲ್ಲಿ ಬಿಡಾರ ಹೂಡಿರುವ ನಮಗೆ ಹಬ್ಬ ಹರಿದಿನಗಳಿಗೆ ಊರಿಗೆ ಹೋದಾಗ ಹೆಚ್ಚಿಗೆ ಸಮಯ ಸಿಕ್ಕಿದ ಅನುಭವ ಆಗುವುದು ಸಹಜ. ಅದಲ್ಲದೆ ಕಳೆದುಕೊಂಡದನ್ನು ಮತ್ತೆ ಪಡೆದು ಬೆಸೆದುಕೊಂಡ ಭಾವ. ಬಸ್ಸಿಂದ ಇಳಿದು ಮನೆಗೆ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಸಿಗುವ ದೊಡ್ಡ ಗಡಿಯಾರ ಕಂಬ , ಅದೇ ಹಳೆಯ ಕಟ್ಟಡಗಳು , ತಾಲೂಕು ಮೈದಾನ   ಹೀಗೆ ಇವೆಲ್ಲವೂ ಪಿಸುಮಾತಿನಲ್ಲಿ ಅಲ್ಲಿ ಕಳೆದ ಕ್ಷಣಗಳನ್ನು ನೆನಪಿಸಿದಂತೆ ಭಾಸವಾಗಿ ಮುಗುಳುನಗೆ ಮುಖವನ್ನು ಅರಳಿಸಿದ್ದು ಉಂಟು. ಮುಸ್ಸಂಜೆಯ ದೀಪ ಹೊತ್ತಿಸಿ ಮನೆಯ ಜಗುಲಿಯಲ್ಲಿ ಕೂತು ಅಪ್ಪ ಅದೇನೋ ಆಲೋಚನೆಯಲ್ಲಿದ್ದಾಗ ನಾನು ಅವರೊಟ್ಟಿಗೆ ನಡೆಸುತ್ತಿದ್ದ ಸಂಭಾಷಣೆಗಳು ಮನೆ ಬಿಟ್ಟು ಮರಳಿದ ಮತ್ತೆಯೂ ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತದೆ. ಪೂರ್ಣಿಮೆಯ ಬೆಳಕು , ಕುಟುರ್ ಪಕ್ಷಿಯ ಸದ್ದು , ಮಿಣುಕು ಹುಳ , ಅಪ್ಪನ ಬೆಚ್ಚಗಿನ ಮಡಿಲು , ತಂಪು ಗಾಳಿ ... ನಾನು: ಏನು ಯೋಚನೆ ಅಪ್ಪ ? ಅಪ್ಪ:   ನಿಮಗೆ ಇಷ್ಟು ಒಳ್ಳೆ ಪರಿಸರ ಸಿಗಲ್ಲ ಅನ್ನೋ ಯೋಚನೆ ಅಷ್ಟೆ. ನಾನು: ಹೌದು ಅಪ್ಪ. ನಮಿಗೆ ಅದು ಸಾಧ್ಯ ಆಗೋದು ಕಷ್ಟನೆ ಅಲ್ವ ಅಪ್ಪ ?! ಅಪ್ಪ:   ಈಗ ನಾವು ಅನುಭವಿಸುತ್ತಿರುವ ಈ ಜಾಗವನ್ನು ಯಾವುದೋ ಬ್ಯಾಂಕ್ ಸ್ವಂತ ಕಟ್ಟಡ ನಿರ್ಮಿಸಲು ಕೇಳಿತ್ತು. ಒಂದೊಂದು ಪೈಸೆಗು ಕಷ್ಟ ಇದ್ದ ಆ ದಿನಗಳಲ್ಲಿಯೂ ಇದನ್ನು ಮಾರಾಟ ಮಾಡಲು ನನ್ನ ಮಾವ ಬಿಡಲಿಲ್ಲ. ನಾನು: ಯಾಕಪ್ಪಾ ? ...

ಆ ದಿನಗಳನ್ನು ಮತ್ತೊಮ್ಮೆ ಬದುಕಿದೆವು

Image
ಕಾಲೇಜ್ ದಿನಗಳಲ್ಲಿ ಸ್ನೇಹಿತೆಯರ ಜೊತೆ ಕಳೆದ ದಿನಗಳು ಅವಿಸ್ಮರಣೀಯ! ಅಲ್ಲಿ ಕಲಿತ ಪಾಠಗಳು ಅನೇಕ. ದ್ವಿತೀಯ ವರ್ಷದ ಬಿಎಸ್ಸಿಯಲ್ಲಿರುವಾಗ ನಮಗೆ ಬಂದ   ಒಂದು ಕುತೂಹಲ ಅದೇನೆಂದರೆ ಲಯ ,  ಓದುವುದರಲ್ಲಿ   ಮೊದಲು ಎಂದೋ ಅಥವಾ ಬಹಳ    ಶ್ರೀಮಂತೆ ಎಂದೋ ನಮ್ಮ ಜೊತೆ ಅಷ್ಟಾಗಿ ಸೇರದೆ ತನ್ನ ಪಾಡಿಗೆ ಇರುತ್ತಾಳೆ ಎಂಬುದು . ಒಂದು ದಿನ ಅವಳಲ್ಲಿ ಕೇಳಿದೆವು "ಅದೇಕೆ ನೀನು ಯಾರಲ್ಲಿಯೂ ಹೆಚ್ಚು ಮಾತನಾಡುವುದಿಲ್ಲ ..."   ಆಕೆ ಸಣ್ಣದಾದ ನಗುವೊಂದನ್ನು ತರಿಸಿಕೊಂಡು ಹೇಳಿದಳು  "  ಹಾಗೇನೂ ಇಲ್ಲ ." “ ಮತ್ತೆ ಪ್ರತಿ ಬಾರಿ ಕರೆದಾಗಲೂ ಏನಾದರೂ ಕಾರಣ ಹೇಳಿ ತಪ್ಪಿಸಿಕೂಳ್ತಿ ನಮ್ಮೊಡನೆ ಹೊರಗೆ ಮಾರುವ ಚುರುಮುರಿ ತಿನ್ನುಲು ನಿನಗೆ ಇಷ್ಟ ಇಲ್ಲದಿದ್ದರೆ ಕಡೆ ಪಕ್ಷ ಒಟ್ಟಿಗೆ ಬರಬಹುದಲ್ಲಾ ?"  ಎಂಬ ನಮ್ಮ ಪ್ರಶ್ನಗೆ ಆಕೆ ಅಂದಳು" ನನಗೆ ಚುರುಮುರಿ ತಿನ್ನುವ ಆಸೆ ಇಲ್ಲ ಅಂತಲ್ಲ ಅದಕ್ಕಾಗಿ ಖರ್ಚು ಮಾಡುವ ಮನಸ್ಸಿಲ್ಲ ಅಷ್ಟೇ" ನಾವು ಕೇಳಿಯೇ ಬಿಟ್ಟೆವು  " ಹಾಗಾದರೆ   ಪ್ರತಿ ದಿನ ನಿನ್ನ ಬಟ್ಟೆಗೆ ಹೊಂದುವ ಬಣ್ಣದ ಕ್ಲಿಪ್ ,  ನಿನ್ನ ಉಗುರಿನ ಬಣ್ಣಗಳಿಗೆ  "... ಅವಳ ಕಣ್ಣುಗಳು ತೇವ ಆಗಿತ್ತು. ಅಂದು ಒಂದು ಘಂಟೆ ಮೊದಲೇ ತರಗತಿಗಳು ಬಿಟ್ಟಿದ್ದರಿಂದ ನಾವೆಲ್ಲ   ಅಲ್ಲೆ   ಮರದಡಿಯಲ್ಲಿ ಕೂತು ಲಯಳಲ್ಲಿ ಮಾತನಾಡಲು ಶುರು ಮಾಡಿದೆವು. ಅವಳನ್ನು ನೋಯಿಸ...