ಮುಖವಾಡ
ಮಹಾನಗರಿಯ ಸರ್ಕಾರಿ ಪದಿಪೂರ್ವ ಕಾಲೇಜಿಗೆ ವರ್ಗಾವಣೆ ಆದದ್ದು ಶರ್ಮರಿಗೆ ಸಮಾಧಾನಕರ ಸಂಗತಿಯಾಗಿತ್ತು. ಅವರಿಗೆ ಇದ್ದ ಏಕೈಕ ಪುತ್ರಿ ಇಲ್ಲಿಯೇ ವ್ಯಾಸಂಗ ಮಾಡುತ್ತಿದ್ದಳು. ತಮ್ಮ ಕಡೆಯ 5-6 ವರ್ಷಗಳ ಸೇವೆಯನ್ನು ಸಕುಟುಂಬ ಸಮೇತರಾಗಿ ಇದ್ದು ಪೂರೈಸುವುದು ಅವರ ಕನಸಾಗಿತ್ತು. ಶರ್ಮರು ನಾನಾ ಹಳ್ಳಿ ಹಾಗೂ ಪಟ್ಟಣಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಇಲ್ಲಿಗೆ ವರ್ಗವಾಗುವ ಮೊದಲು ಕಾಫಿಬೆಟ್ಟ ಎಂಬ ಹಳ್ಳಿಯಲ್ಲಿ ಸತತ 5 ವರ್ಷಗಳ ಸೇವೆ ಸಲ್ಲಿಸಿದ್ದರು. 23 ಮಕ್ಕಳಷ್ಟೇ ಇದ್ದ ಶಿಕ್ಷಣ ಸಂಸ್ಥೆಯನ್ನು 2600 ಕ್ಕೆ ಏರಿಸಿ ಅಲ್ಲಿಯ ಮಕ್ಕಳು ಪೇಟೆಯ ಮಕ್ಕಳಿಗಿಂತ ಒಂದು ಕೈ ಮೇಲೆ ಎಂಬ ಛಾಪು ಮೂಡಿಸಿದ್ದರು. ಅವರ ಸೇವೆ ದೊರೆತ ಅದೆಷ್ಟೋ ಶಾಲಾ - ಕಾಲೇಜುಗಳು ಇಂದು ಮಾದರಿ ಸಂಸ್ಥೆಯಾಗಿ ಪರಿವರ್ತನೆಯಾಗಿದೆ. ಅವರ ವಿಶೇಷತೆ ಎಂದರೆ ಒಂದು ದಿನವೂ ಕೂಡ ಅವರು ಮಾಡಿದ ಸತ್ಕಾರ್ಯಗಳ ಬಗ್ಗೆ ಮಾತನಾಡದೆ ಇರುವುದು. ಯಾವ ವ್ಯಕ್ತಿಯ ಕುರಿತಾದ ನಕಾರಾತ್ಮಕ ಮಾತುಗಳನ್ನು ಯಾವತ್ತೂ ಆಡದೆ ಇರುವುದು. ಕಾಫಿಬೆಟ್ಟದಲ್ಲಿ ಶಾಲೆಯನ್ನು ಅಷ್ಟೇ ಅಲ್ಲದೇ ಅಲ್ಲಿರುವ ಕೃಷಿಕರಿಗು ಅದೆಷ್ಟೋ ಮಾರ್ಗದರ್ಶನ ನೀಡಿ ಅವರೆಲ್ಲರ ಮನದಲ್ಲಿ ದೇವರ ರೂಪಿಯಾಗಿದ್ದರು. ಅವರು ಅಲ್ಲಿಂದ ವರ್ಗವಾಗಿ ಹೋದಾಗ ಅಲ್ಲಿನ ಜನಗಳು ತೋರಿದ ಅಭಿಮಾನ ಶರ್ಮಾರನ್ನು ಕಟ್ಟಿ ಹಾಕಿತ್ತು. ಅವರ ಬಗ್ಗೆ ಮಾತನಾಡಲು ಬಂದ ಪ್ರತಿಯೊಬ್ಬರೂ ...