ಸಂತೃಪ್ತಿ
ಜೋಯಿಸರು ಜೇನು ಸಂಶೋಧನ ಕೇಂದ್ರದಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಜ್ಜಯಿನಿ ಇಂದ ಮೂಡಿಗೆರೆವರೆಗೆ ಅನೇಕ ರಾಜ್ಯಗಳಲ್ಲಿ ಸೇವೆಸಲ್ಲಿಸಿದ್ದರಲ್ಲದೆ ಅಲ್ಲಿಯ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಜೇನು ಉತ್ಪಾದನೆಗೆ ನೂರು ಲೀಟರ್ ಗುರಿಯೆಂದು ನೀಡಿದ್ದರೆ ಜೋಯಿಸರು ನೂರೈವತ್ತು ಇನ್ನೂರು ವರೆಗೂ ತಲುಪುತ್ತಿದ್ದರು. ಸರಕಾರಿ ಕೆಲಸವಾದರೂ ಬೆಳ್ಳಂ ಬೆಳಗ್ಗೆ ನಾಕು ಗಂಟೆಯ ಚಳಿಯನ್ನು ಲೆಕ್ಕಿಸದೆ , ತಣ್ಣೀರು ಸ್ನಾನ , ದೇವರ ಪೂಜೆ ಮಾಡಿ, ಜೇನು ಪೆಟ್ಟಿಗೆಗಳನ್ನು ಸರಿಯಾದ ಸ್ಥಳಕ್ಕೆ ರವಾನಿಸುವ ಕೆಲಸವನ್ನು ತಾವೇ ಖುದ್ದಾಗಿ ನಿಂತು ಮಾಡಿಸುತ್ತಿದ್ದರು. ಅವರ ಈ ನಿಸ್ವಾರ್ಥ ಸೇವೆಯಿಂದ ಅಲ್ಲಿನ ಸೊಸೈಟಿಗೆ ಒಳ್ಳೆಯ ಹೆಸರು ಬರುತ್ತಿತ್ತು ಅಲ್ಲದೆ ವರ್ಷದ ಲಾಭದಲ್ಲಿ ಸಣ್ಣ ಒಂದು ಭಾಗವು ಇನಾಮಾಗಿ ಎಲ್ಲಾ ಕೆಲಸಗಾರರಿಗೆ ಲಭಿಸುತ್ತಿತ್ತು.ಹೀಗೆ ಕಾಯಕವೇ ಕೈಲಾಸ ಎಂದು ಜೋಯಿಸರು ನಂಬಿದ್ದರು. ಅವರಿಗೆ ನಾಗಾಲ್ಯಾಂಡ್ಗೆ ವರ್ಗವಾದಗಲೂ ಹೋಗಲು ತಯಾರಿದ್ದರು ಅಲ್ಲದೆ ಅದನ್ನು ಪತ್ನಿಯೊಂದಿಗೆ ಹೇಳಿ ಬೇಕಾಗುವ ಸಿದ್ಧತೆ ಮಾಡಿಕೊಳ್ಳಲು ಸೂಚನೆ ಕೊಟ್ಟರು. ಜೋಯಿಸರ ಮಡದಿ ತ್ರಿಪುರ ಸುಂದರಿ ಅಮ್ಮನವರು. ಹೆಸರಿಗೆ ತಕ್ಕಂತೆ ಬಹಳ ಲಕ್ಷಣವಾಗಿದ್ದರು. ಆಕೆ ಬಹಳ ಮುಂದಾಲೋಚನೆ ಇಂದ ಯೋಚಿಸುವವರು. ನಾಗಾಲ್ಯಾಂಡ್ಗೆ ಹೋಗಲು ನಾಲ್ಕು ಜನ ಮಕ್ಕಳನ್ನು ಕಟ್ಟಿಕೊಂಡೇ ಹೋಗಬೇಕು , ಅಲ್ಲಿ ಶಾಲೆ ಹೇಗೋ ಏನೋ ? ಇನ್ನೂ ಊಟ , ವಸತಿ ಅದೆಲ್ಲ