ಆಕೆ ನಡೆದ ಹಾದಿಯಲ್ಲಿ ಮಲ್ಲಿಗೆ ಹೂಗಳು ಅರಳಿದ್ದವು ........
ಈ ಕಿಡಕಿಯಲ್ಲಿ ಕೂತು ನಾವಿಬ್ಬರು ಅದೆಷ್ಟು ನಕ್ಕಿದ್ದೆವೊ, ಕೆಳಗೆ ಬಿದ್ದಿದ್ದೇನೇ ಕೂಡ. ಹಾಗೆ ಬಿದ್ದಾಗ ಆಕೆ ಗಾಬರಿಯಿಂದ ಕೈ ಹಿಡಿದು ಮೇಲೆತ್ತಿದ್ದಾಳೆ, ಅಲ್ಲೇ ಪೆಟ್ಟು ಕೊಟ್ಟು ನಕ್ಕಿದ್ದಾಳೆ, ತಾನೂ ಕೆಳಗೆ ಬಂದು ಮುಖವನ್ನೆ ನೋಡಿದ್ದಾಳೆ ಅವಳೊಂದಿಗಿನ ನೆನಪುಗಳು ಅವಳಷ್ಟೇ ಸುಂದರ. ನಾನು ನನ್ನ ಉನ್ನತ ಶಿಕ್ಷಣಕ್ಕಾಗಿ ಮನೆ ಬಿಟ್ಟಿದ್ದೆ. ಸ್ನೇಹಿತರ ಸಹಾಯದಿಂದ ಕಾಲೇಜಿಗೆ ಹತ್ತಿರವಾಗುವ ಹಾಗು ನನಗೆ ಸರಿ ಹೊಂದುವ ಈ ಮನೆಯನ್ನು ಸೇರಿಕೊಂಡೆ. ಆ ಮನೆಯ ಮೇಲೆ ಇದ್ದ ಕೋಣೆಯನ್ನು ನನಗೆ ಕೊಟ್ಟಿದ್ದರು. ಅದು ಹಳೆಕಾಲದ ದೊಡ್ಡ ಮನೆ,ಬಹಳ ಚಂದವಾಗಿ ಇಟ್ಟಿದ್ದರು.ನಾನು ಆದಷ್ಟು ಮನೆಯ ಒಡತಿ ಆದ ಯಶೋದಮ್ಮನವರನ್ನು ಮಾತನಾಡಿಸಲು ಹೋಗುತ್ತಿರಲಿಲ್ಲ, ನನ್ನ ಮನೆಯ ಕಥೆ, ಅಥವಾ ಆಸ್ತಿ ಪಾಸ್ಥಿಯ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕೊಡುವ ವ್ಯವಧಾನ ನನಗೆ ಇರಬೇಕಲ್ಲ!ಆಶ್ಚರ್ಯವೆಂದರೆ ಅವರು ಕೂಡ ನನ್ನ ತಂಟೆಗೆ ಬರುತ್ತಿರಲಿಲ್ಲ. ಅದೊಂದು ದಿನ ಕಾಲೇಜ್ ಬೇಗ ಮುಗಿದಿತ್ತು , ಸೀದ ಮನೆಗೆ ಬಂದು ತುಸು ಹೊತ್ತು ಮಲಗೋಣ ಅನ್ನಿಸಿತು.ಮಲಗಿದರೆ ಸರಿಯಾಗಿ ನಿದ್ರೆ ಬರಲಿಲ್ಲ, ಇಲ್ಲ ಸಲ್ಲದ ಯೋಚನೆಗಳು ಒಂದೊಂದಾಗಿ ಹಾಜಾರಾತಿ ಹಾಕುತ್ತಿದ್ದವು. ಎದ್ದು ಹೊರಗೆ ಬಂದೆ, ಕೆಲ ಸರಕಾರಿ ಶಾಲಾ ಮಕ್ಕಳು ಬರುತ್ತಿರುವುದನ್ನು ಕಂಡೆ, ಕೆಲ ಸಣ್ಣವು ಮತ್ತೆ ಕೆಲ ದೊಡ್ಡವು, ಏನೆಂದು ನೋಡ ಹೋದೆ.ಆ ಮಕ್ಕಳೆಲ್ಲ ಮನೆಯ ಇನ್ನೊಂದು ಭಾಗದ ಕಡೆಗೆ ಹೋಗುತ್ತಿದ್ದರು. ನಾನು ತುಸು ಹ...