ಬಿತ್ತಿದ್ದು
ಗಡಿಯಾರದ ಗೂಡಿನಿಂದ ಹೊರಬಂದ ಜೋಡಿಹಕ್ಕಿಗಳು ೧೨ ಬಾರಿ ಕೂಗಿ ಒಳ ಹೋದವು. ಹಾಸಿಗೆಯಲ್ಲಿ ಹೋಣಕುತ್ತ ಇದ್ದ ಚಾಮಿ, ಹೊದಕೆ ತೆಗೆದು ಕಣ್ಣು ಮುಚ್ಚಿ - ಹಲ್ಲು ಕಚ್ಚಿ, ಒಡೆದ ಪಾದಗಳನ್ನು ಕೆಳಗೆ ಇರಿಸಿ ನಿಟ್ಟುಸಿರು ಬಿಟ್ಟು ಅಡುಗೆ ಮನೆಗೆ ನಡೆದ. ಎಂದಿನಂತೆ ಚಾ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು, ಹಾಲು ಚಾ ಹುಡಿ ಹಾಕಿದ. ತನ್ನ ಕೊರಳು ನೋವಿಗೆ ಮೂಲಾಮೊಂದನ್ನು ಹಚ್ಚಿ, ಕೈ ತೊಳೆದು ಚಾ ಒಂದೆರಡು ಬಾರಿ ಮೇಲೆ ಕೆಳಗೆ ಸುರಿದ, ಶುಂಠಿ- ಏಲಕ್ಕಿ ಗುದ್ದಿ ಕುದಿಯುವ ಚಾಯಕ್ಕೆ ಬೆರೆಸಿ ಲೋಟಕ್ಕೆ ಹಾಕುವಷ್ಟರಲ್ಲಿ ಹಿಂದಿನಿಂದ " ನಂಗೂ ಒಂದು ಲೋಟ ಚಾ ಸಿಗ್ಬೋದ ಅಜ್ಜ ?!" ಚಾಮಿ : ಗಂಟೆ ೧೨ , ನಿದ್ದೆ ಬರ್ತ ಇಲ್ವಾ ಮಗು ? ಇಷ್ಟು ಹೊತ್ತಿಗೆ ಚಾ ಒಳ್ಳೇದು ಅಲ್ಲ ಆದ್ರೂ ಇವತ್ತು ಒಂದು ದಿನ ಕುಡಿ ತೊಂದ್ರೆ ಇಲ್ಲ. ಮೊಮ್ಮಗಳು : (ಜೋರಾಗಿ ನಕ್ಕು ) ನೀನು ಪ್ರತಿ ದಿನ ಕುಡಿತ್ಯ ? ಒಳ್ಳೇದು ಅಲ್ಲ ಅಂತ ಗೊತ್ತಿದ್ರೂ ?! ಯಾಕೆ ಅಜ್ಜ ಚಾಮಿ : ಏನ್ ಮಾಡ್ಲಿ ಚಿಂತೆ , ರಾತ್ರಿ ನಿದ್ರೆ ಬರೋಲ್ಲ ಕಣೆ! ಮೊಮ್ಮಗಳು : (ಮತ್ತೊಮ್ಮೆ ಜೋರಾಗಿ ನಕ್ಕು) ಚಿಂತೆ? ಏನು ಚಿಂತೆ? ಚಿಂತೆ ಇಲ್ಲದೆ ಇರೋದೆ ಚಿಂತೆ ನಿಂಗೆ !! ಚಾಮಿ : ಹೌದು ಕಣೆ , ನಿಂಗೆ ಎಲ್ಲಿ ಅರ್ಥ ಆಗುತ್ತೆ ಹೇಳು ನನ್ನ ಕಷ್ಟ ?! ನಿಂಗೆ ಎಲ್ಲಾ ತಮಾಷೆ ಅಲ್ವಾ? ಮೊಮ್ಮಗಳು : ಮತ್ತೇನು ಸುಮ್ನೆ ಮಲ್ಕೊಳೋದು ಬಿಟ್ಟು ಮಧ್ಯರಾತ್ರಿ ಚಾ ಕುಡಿಯೋದು ಯಾವ ಚಿಂತೆ ಪರಿಹಾರಕ್ಕೆ?! ಇರ್ಲಿ ಬಾ ಚಂ...