ಆಶಯ
ದಿನವೂ ಬಸ್ಸಿಂದ ಇಳಿದು , ರಸ್ತೆ ದಾಟುವಾಗ ಕಣ್ಣುಗಳನ್ನು ಸಣ್ಣ ಮಾಡಿ , ದಯವಿಟ್ಟು ನಿಧಾನಿಸಿ ಎಂಬಂತೆ ಮುಖವನಿಟ್ಟು ವೇಗವಾಗಿ ಹೋಗುವ ವಾಹನಗಳನ್ನು ನಿಲ್ಲುವಂತೆ ಮಾಡುವ ಪುಟ್ಟ ಪ್ರಯತ್ನ ಇವಳದು. ಒಂದು ವೇಳೆ ನಿಲ್ಲಿಸಿದರೆ , ಅವರ ದಿನಚರಿ ಅದ್ಭುತವಾಗಿರಲ ಎಂದು ಮನಸಾ ಪ್ರಾರ್ಥಿಸುವಳು .ಹೀಗೆ ಮಾಡಿದಾಗ ನಿಲ್ಲಿಸುತ್ತಿದ್ದ ವಾಹನಗಳು ಕೆಲವೇ ಕೆಲವು ಮಾತ್ರ. ರಸ್ತೆಯ ಇನ್ನೊಂದು ಕಡೆ ಇರುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಈಕೆ. ವಾಹನ ಚಲಾಯಿಸುತ್ತಿರುವ ಯಾರೇ ಇವಳನ್ನು ನೋಡುವ ವ್ಯವಧಾನ ತೋರಿದ್ದರೆ , ಶಾಲೆಗೆ ಹೋಗುವ ಮಗುವೇನೋ ಅಂದುಕೊಳ್ಳುವಂತಹ ಮುಗ್ಧ ಮುಖ ಇವಳದು.ಹೀಗೆ ಒಂದು ದಿನ ವಾಹನ ನಿಲ್ಲಿಸಿದ ಇವನಿಗೆ ಇವಳ ಮುಗ್ಧತೆ ತುಂಬಾ ಇಷ್ಟವಾಗಿತ್ತು. ಅಷ್ಟೇ ಅಲ್ಲದೆ ಆ ದಿನ ಅವನು ಕನಸಿನಲ್ಲಿಯೂ ಯೋಚಿಸಲು ಅಸಾಧ್ಯವಾದ ಒಂದೊಳ್ಳೆ ಬೆಳವಣಿಗೆ ಅವನ ವ್ಯವಹಾರದಲ್ಲಿ ಆಗಿತ್ತು.ಅಂದಿನಿಂದ ಪ್ರತಿನಿತ್ಯ ಆಕೆ ರಸ್ತೆ ದಾಟುವ ಸಮಯಕ್ಕೆ ಸರಿಯಾಗಿ ಅಲ್ಲಿ ತಲುಪುತ್ತಿದ್ದ. ಒಂದು ವೇಳೆ ಬೇಗ ತಲುಪಿದರು ಆಕೆಯ ಬರುವಿಕೆಗೆ ಕಾಯುತ್ತಿದ್ದ. ಆಕೆಯ ಮುಗ್ಧ ಮುಖ ಅವನಲ್ಲಿ ಸಮಾಧಾನ ತರುತ್ತಿತ್ತು. ಆಕೆ ತುಂಬು ಮನಸ್ಸಿನಿಂದ ಒಳ್ಳೆಯದು ಆಗಲೆಂದು ಹಾರೈಸಿದಂತೆ ಅನಿಸುತ್ತಿತ್ತು ಕೂಡ. ಅವಳಿಗೂ ಅದೆಷ್ಟು ರೂಢಿ ಆಗಿತ್ತು ಅಂದರೆ ಈಗೆಲ್ಲ ಮುಖವನ್ನು ಸಣ್ಣ ಮಾಡಿ ಸೀದ ರಸ್ತೆ ದಾಟಿ ಹೋಗುವಳ , ಕಿರು ನಗುವೊಂದನ್ನು ಬೀರುತ್ತಾ. ಅಂದು ...