ಸಾರ್ಥಕ ಬದುಕಿನ ಸುಂದರ ಕ್ಷಣಗಳು...
ಅತ್ತೆ ಮಾವ , ಅವರ ಮಕ್ಕಳು ಎಂದರೆ ನನ್ನ ಜೊತೆಗಾರರು ಇವರೊಟ್ಟಿಗೆ ಕೂನೂರಿಗೆ ಹೋಗಿದ್ದೆ. ನಮ್ಮ ತಂಗುಧಾಮ ಗುಡ್ಡದ ಮೇಲೆ ಇತ್ತು. ಅಲ್ಲಿಂದ ಪೂರ್ತಿ ಊರು ನೋಡಿ ನಂಬಲಾರದ ಸೃಷ್ಠಿಯ ಸೊಬಗನ್ನು ಕಣ್ಣು ತುಂಬಿಸಿದಷ್ಟು ಸಾಲದು ಎಂದು ಅನ್ನಿಸಿದಂತು ನಿಜ ಅದರೊಂದಿಗೆ ಅಲ್ಲಿ ಕೊರೆಯುವ ಚಳಿ! ಕೂನೂರಿನ ಚುಕುಬುಕು ಬಂಡಿಯಲ್ಲಿ ಕೂತು , ಅಲ್ಲಿ ಇಲ್ಲಿ ತಿರುಗಿ ಊಟವಾದ ನಂತರ ನಾವೆಲ್ಲರೂ ನಿದ್ರಾ ದೇವತೆಗೆ ಶರಣಾದೆವು. ಮರುದಿನ ನನ್ನ ಅತ್ತೆ ಎಂದಿನಂತೆ ನಾಲ್ಕುವರೆಗೆ ಎದ್ದಾಗ ನನಗೂ ಎಚ್ಚರ ಆಯಿತು. ಕೊರೆಯುವ ಚಳಿ ಇದ್ದರೂ ಅತ್ತೆ ಎದ್ದದ್ದು ನನ್ನನ್ನು ಏಳಲು ಪ್ರೇರೇಪಿತು. ನಾನು ಅವರೊಟ್ಟಿಗೆ ಸೇರಿಕೊಂಡೆ. ನೀರು ಬಿಸಿಯಾಗುವ ಹೊತ್ತಿಗೆ , ಅತ್ತೆ ಬಟ್ಟೆ - ಮತ್ತಿತರ ವಸ್ತುಗಳನ್ನು ಅಣಿಮಾಡಿದರು. ಅತ್ತೆ ಫ್ಲಾಸ್ಕ್ ಅನ್ನು ಒಂದು ಕೈಚೀಲಕ್ಕೆ ಹಾಕಿಕೊಂಡರು. ಇಬ್ಬರು ಹೊರಟೆವು. ಗುಡ್ಡೆಯ ಮತ್ತೊಂದು ಬದಿ ಸಂಪೂರ್ಣ ಮಂಜಿನಿಂದ ಕೂಡಿದ್ದ ಅದ್ಭುತ ನೋಟ. ಬೆಳ್ಳಂಬೆಳಗ್ಗೆ ಆದ ಕಾರಣ ದಿನಪತ್ರಿಕೆಯ ಜೋಡಿಸುವವರು , ವಾಹನ ಇಲ್ಲದ ಕಾಲಿ ರಸ್ತೆಗಳು , ಹೂ ಮಾರುವವರು , ನಡಿಗೆಗೆಂದು ಬಂದವರು ಹೀಗೆ ನಿಷಬ್ದವಾದ ವಾತಾವರಣ ಇತ್ತು. ಅತ್ತೆ ಅಲ್ಲೆ ಒಂದು ಅಂಗಡಿಗೆ ಹೋಗಿ ಒಳ್ಳೆಯ ಚಹಾ ಎಲ್ಲಿ ಸಿಗುವುದೆಂದು ವಿಚಾರಿಸಿದರು. ಮುಖ್ಯ ರಸ್ತೆ ಕಳೆದು , ಯಾವುದೋ ಕಿರು ದಾರಿ ಹಿಡಿದು ಮುಂದೆ ನಡೆದೆವು. ಅಲ್ಲಿ ಚಹಾ ಕುಡಿಯುತ್ತಾ ...