Posts

ಸಂತೃಪ್ತಿ

Image
ಜೋಯಿಸರು ಜೇನು ಸಂಶೋಧನ ಕೇಂದ್ರದಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಜ್ಜಯಿನಿ ಇಂದ ಮೂಡಿಗೆರೆವರೆಗೆ ಅನೇಕ ರಾಜ್ಯಗಳಲ್ಲಿ ಸೇವೆಸಲ್ಲಿಸಿದ್ದರಲ್ಲದೆ ಅಲ್ಲಿಯ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಜೇನು ಉತ್ಪಾದನೆಗೆ ನೂರು ಲೀಟರ್ ಗುರಿಯೆಂದು ನೀಡಿದ್ದರೆ ಜೋಯಿಸರು ನೂರೈವತ್ತು ಇನ್ನೂರು ವರೆಗೂ ತಲುಪುತ್ತಿದ್ದರು. ಸರಕಾರಿ ಕೆಲಸವಾದರೂ ಬೆಳ್ಳಂ ಬೆಳಗ್ಗೆ ನಾಕು ಗಂಟೆಯ ಚಳಿಯನ್ನು ಲೆಕ್ಕಿಸದೆ , ತಣ್ಣೀರು ಸ್ನಾನ , ದೇವರ ಪೂಜೆ ಮಾಡಿ, ಜೇನು ಪೆಟ್ಟಿಗೆಗಳನ್ನು ಸರಿಯಾದ ಸ್ಥಳಕ್ಕೆ ರವಾನಿಸುವ ಕೆಲಸವನ್ನು ತಾವೇ ಖುದ್ದಾಗಿ ನಿಂತು ಮಾಡಿಸುತ್ತಿದ್ದರು. ಅವರ ಈ ನಿಸ್ವಾರ್ಥ ಸೇವೆಯಿಂದ ಅಲ್ಲಿನ ಸೊಸೈಟಿಗೆ ಒಳ್ಳೆಯ ಹೆಸರು ಬರುತ್ತಿತ್ತು ಅಲ್ಲದೆ ವರ್ಷದ ಲಾಭದಲ್ಲಿ ಸಣ್ಣ ಒಂದು ಭಾಗವು ಇನಾಮಾಗಿ ಎಲ್ಲಾ ಕೆಲಸಗಾರರಿಗೆ ಲಭಿಸುತ್ತಿತ್ತು.ಹೀಗೆ ಕಾಯಕವೇ ಕೈಲಾಸ ಎಂದು ಜೋಯಿಸರು ನಂಬಿದ್ದರು. ಅವರಿಗೆ ನಾಗಾಲ್ಯಾಂಡ್ಗೆ ವರ್ಗವಾದಗಲೂ ಹೋಗಲು ತಯಾರಿದ್ದರು  ಅಲ್ಲದೆ  ಅದನ್ನು ಪತ್ನಿಯೊಂದಿಗೆ ಹೇಳಿ ಬೇಕಾಗುವ ಸಿದ್ಧತೆ ಮಾಡಿಕೊಳ್ಳಲು ಸೂಚನೆ ಕೊಟ್ಟರು.   ಜೋಯಿಸರ ಮಡದಿ ತ್ರಿಪುರ ಸುಂದರಿ ಅಮ್ಮನವರು. ಹೆಸರಿಗೆ ತಕ್ಕಂತೆ ಬಹಳ ಲಕ್ಷಣವಾಗಿದ್ದರು. ಆಕೆ ಬಹಳ ಮುಂದಾಲೋಚನೆ ಇಂದ ಯೋಚಿಸುವವರು. ನಾಗಾಲ್ಯಾಂಡ್ಗೆ ಹೋಗಲು ನಾಲ್ಕು ಜನ ಮಕ್ಕಳನ್ನು ಕಟ್ಟಿಕೊಂಡೇ ಹೋಗಬೇಕು , ಅಲ್ಲಿ ಶಾಲೆ ಹೇಗೋ ಏನೋ ? ಇನ್ನೂ ಊಟ...

ಮುಖವಾಡ

Image
ಮಹಾನಗರಿಯ ಸರ್ಕಾರಿ ಪದಿಪೂರ್ವ ಕಾಲೇಜಿಗೆ ವರ್ಗಾವಣೆ ಆದದ್ದು ಶರ್ಮರಿಗೆ ಸಮಾಧಾನಕರ ಸಂಗತಿಯಾಗಿತ್ತು. ಅವರಿಗೆ ಇದ್ದ ಏಕೈಕ ಪುತ್ರಿ ಇಲ್ಲಿಯೇ ವ್ಯಾಸಂಗ ಮಾಡುತ್ತಿದ್ದಳು. ತಮ್ಮ ಕಡೆಯ 5-6 ವರ್ಷಗಳ ಸೇವೆಯನ್ನು ಸಕುಟುಂಬ ಸಮೇತರಾಗಿ   ಇದ್ದು ಪೂರೈಸುವುದು ಅವರ ಕನಸಾಗಿತ್ತು.     ಶರ್ಮರು ನಾನಾ ಹಳ್ಳಿ ಹಾಗೂ ಪಟ್ಟಣಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಇಲ್ಲಿಗೆ ವರ್ಗವಾಗುವ ಮೊದಲು ಕಾಫಿಬೆಟ್ಟ ಎಂಬ ಹಳ್ಳಿಯಲ್ಲಿ ಸತತ 5 ವರ್ಷಗಳ ಸೇವೆ ಸಲ್ಲಿಸಿದ್ದರು. 23 ಮಕ್ಕಳಷ್ಟೇ ಇದ್ದ ಶಿಕ್ಷಣ ಸಂಸ್ಥೆಯನ್ನು 2600 ಕ್ಕೆ ಏರಿಸಿ ಅಲ್ಲಿಯ ಮಕ್ಕಳು ಪೇಟೆಯ ಮಕ್ಕಳಿಗಿಂತ ಒಂದು ಕೈ ಮೇಲೆ ಎಂಬ ಛಾಪು ಮೂಡಿಸಿದ್ದರು. ಅವರ ಸೇವೆ ದೊರೆತ ಅದೆಷ್ಟೋ ಶಾಲಾ - ಕಾಲೇಜುಗಳು ಇಂದು ಮಾದರಿ ಸಂಸ್ಥೆಯಾಗಿ ಪರಿವರ್ತನೆಯಾಗಿದೆ. ಅವರ ವಿಶೇಷತೆ ಎಂದರೆ ಒಂದು ದಿನವೂ ಕೂಡ ಅವರು ಮಾಡಿದ ಸತ್ಕಾರ್ಯಗಳ   ಬಗ್ಗೆ   ಮಾತನಾಡದೆ ಇರುವುದು. ಯಾವ ವ್ಯಕ್ತಿಯ ಕುರಿತಾದ ನಕಾರಾತ್ಮಕ ಮಾತುಗಳನ್ನು ಯಾವತ್ತೂ ಆಡದೆ ಇರುವುದು.     ಕಾಫಿಬೆಟ್ಟದಲ್ಲಿ ಶಾಲೆಯನ್ನು ಅಷ್ಟೇ ಅಲ್ಲದೇ ಅಲ್ಲಿರುವ ಕೃಷಿಕರಿಗು ಅದೆಷ್ಟೋ ಮಾರ್ಗದರ್ಶನ ನೀಡಿ ಅವರೆಲ್ಲರ ಮನದಲ್ಲಿ ದೇವರ ರೂಪಿಯಾಗಿದ್ದರು. ಅವರು ಅಲ್ಲಿಂದ ವರ್ಗವಾಗಿ ಹೋದಾಗ ಅಲ್ಲಿನ ಜನಗಳು ತೋರಿದ ಅಭಿಮಾನ ಶರ್ಮಾರನ್ನು ಕಟ್ಟಿ ಹಾಕಿತ್ತು. ಅವರ ಬಗ್ಗೆ ಮಾತನಾಡಲು ಬಂದ ಪ್ರತಿಯೊಬ್ಬರೂ ...

The Sweetest memories of Shimla

Image
Each time I see Gulab Jamoon it takes me back to our MSc days. We have made innumerable memories together .Our Shimla trip was one of the fun filled journey. We lived each second like tomorrow doesn't exist. After visiting Indian Institute of Advanced study we were taken for shopping in the Mall road. In chilling cold it was Raaz busy shopping some warm clothes for her nephew. I searched some food shop to taste the food of Shimla .We went down the streets by following the map for about 20 minutes and somehow found a sweet shop surrounded by people managed to get gulab jamoon dipped in fuming hot sugar syrup. On that chilling night , watching the moon having hot tastiest Gulab Jamoon, seeing the fumes coming out of it... Raazu said we are lost ,yes I said anyone for that matter for this taste Raazu .She said that she was telling about how to get back to the mall road and my jaw dropped looking at the watch !It was already 9:20 pm and we are asked to be there at th...

ಸಾರ್ಥಕ ಬದುಕಿನ ಸುಂದರ ಕ್ಷಣಗಳು...

Image
ಅತ್ತೆ ಮಾವ , ಅವರ ಮಕ್ಕಳು ಎಂದರೆ ನನ್ನ ಜೊತೆಗಾರರು ಇವರೊಟ್ಟಿಗೆ ಕೂನೂರಿಗೆ ಹೋಗಿದ್ದೆ. ನಮ್ಮ ತಂಗುಧಾಮ ಗುಡ್ಡದ ಮೇಲೆ ಇತ್ತು. ಅಲ್ಲಿಂದ ಪೂರ್ತಿ ಊರು ನೋಡಿ ನಂಬಲಾರದ ಸೃಷ್ಠಿಯ ಸೊಬಗನ್ನು ಕಣ್ಣು ತುಂಬಿಸಿದಷ್ಟು ಸಾಲದು ಎಂದು ಅನ್ನಿಸಿದಂತು ನಿಜ ಅದರೊಂದಿಗೆ ಅಲ್ಲಿ ಕೊರೆಯುವ ಚಳಿ!     ಕೂನೂರಿನ ಚುಕುಬುಕು ಬಂಡಿಯಲ್ಲಿ ಕೂತು , ಅಲ್ಲಿ ಇಲ್ಲಿ ತಿರುಗಿ ಊಟವಾದ ನಂತರ ನಾವೆಲ್ಲರೂ ನಿದ್ರಾ ದೇವತೆಗೆ ಶರಣಾದೆವು. ಮರುದಿನ ನನ್ನ ಅತ್ತೆ ಎಂದಿನಂತೆ ನಾಲ್ಕುವರೆಗೆ ಎದ್ದಾಗ ನನಗೂ ಎಚ್ಚರ ಆಯಿತು. ಕೊರೆಯುವ ಚಳಿ ಇದ್ದರೂ ಅತ್ತೆ ಎದ್ದದ್ದು ನನ್ನನ್ನು ಏಳಲು ಪ್ರೇರೇಪಿತು. ನಾನು ಅವರೊಟ್ಟಿಗೆ ಸೇರಿಕೊಂಡೆ. ನೀರು ಬಿಸಿಯಾಗುವ ಹೊತ್ತಿಗೆ , ಅತ್ತೆ   ಬಟ್ಟೆ - ಮತ್ತಿತರ ವಸ್ತುಗಳನ್ನು ಅಣಿಮಾಡಿದರು.   ಅತ್ತೆ ಫ್ಲಾಸ್ಕ್ ಅನ್ನು ಒಂದು ಕೈಚೀಲಕ್ಕೆ ಹಾಕಿಕೊಂಡರು. ಇಬ್ಬರು ಹೊರಟೆವು. ಗುಡ್ಡೆಯ ಮತ್ತೊಂದು ಬದಿ ಸಂಪೂರ್ಣ ಮಂಜಿನಿಂದ ಕೂಡಿದ್ದ ಅದ್ಭುತ ನೋಟ. ಬೆಳ್ಳಂಬೆಳಗ್ಗೆ ಆದ ಕಾರಣ ದಿನಪತ್ರಿಕೆಯ ಜೋಡಿಸುವವರು , ವಾಹನ ಇಲ್ಲದ ಕಾಲಿ ರಸ್ತೆಗಳು , ಹೂ ಮಾರುವವರು , ನಡಿಗೆಗೆಂದು ಬಂದವರು ಹೀಗೆ ನಿಷಬ್ದವಾದ ವಾತಾವರಣ ಇತ್ತು. ಅತ್ತೆ ಅಲ್ಲೆ ಒಂದು ಅಂಗಡಿಗೆ ಹೋಗಿ ಒಳ್ಳೆಯ ಚಹಾ ಎಲ್ಲಿ ಸಿಗುವುದೆಂದು ವಿಚಾರಿಸಿದರು. ಮುಖ್ಯ ರಸ್ತೆ ಕಳೆದು , ಯಾವುದೋ ಕಿರು ದಾರಿ ಹಿಡಿದು ಮುಂದೆ ನಡೆದೆವು. ಅಲ್ಲಿ ಚಹಾ ಕುಡಿಯುತ್ತಾ ...

ಅಜ್ಜಿ ತನ್ನ ಪುಳ್ಳಿ ಜೊತೆಗೆ ಬೆಸೆದುಕೊಂಡ ರೀತಿ ಜೀವ ಸೆಲೆ ಎಂದರೆ ಏನು ಎಂಬುದನ್ನು ಅದರ ಸೌಂದರ್ಯವನ್ನು ಅಚ್ಚುಕಟ್ಟಾಗಿ ನಿರೂಪಿಸಿದಂತು ಸ್ಪಷ್ಟ!

Image
ಕೆ ಲವು ಪರಿಮಳ ಗತಿಸಿದ ಘಟನೆಗಳನ್ನು ಮತ್ತೊಮ್ಮೆ   ನಮ್ಮ ಮುಂದೆ ಕಟ್ಟಿಕೊಡುತ್ತದೆ. ಪತಂಜಲಿ ಬಟ್ಟೆ ಸಾಬೂನಿನ ಪರಿಮಳ ವಿದ್ಯಾರ್ಥಿ ನಿಲಯದಲ್ಲಿ ಬಟ್ಟೆ ಒಗಿಯುವಾಗಾ ನಮ್ಮ   ಸ್ನೇಹಿತೆಯರನ್ನು ಗೊಳಾಡಿಸಿದ ದಿನಗಳನ್ನು , ಪೊಂಡ್ಸ್ ಕ್ರೀಮ್ ಪರಿಮಳ , ಅಮ್ಮ ನಮಗೆ ಚಳಿಗಾಲದಲ್ಲಿ ಕ್ರೀಮ್ ಹಾಕಿ , ಬೆಚ್ಚೆಗೆ ಇರಲು ಕಾಲು ಚೀಲ ಹಾಕಿಸಿ , ಟೊಪ್ಪಿ ಹಾಕಿಸಿ ಕೂರಿಸಿತಿದ್ದದ್ದನ್ನು , ಅಷ್ಟೆ ಅಲ್ಲ ದಾರಿಯಲ್ಲಿ ಎಲ್ಲೋ ಕೊಳೆತ ಮೊಟ್ಟೆಯ ವಾಸನೆಯಂತೂ ಗಡಗಡ ನಡುಗುತ್ತ ನಿಲ್ಲುತ್ತಿದ ರಸಾಯನ ಶಾಸ್ತ್ರದ ಪ್ರಯೋಗಾಲಯ   ಚಿತ್ರಿಸಿ ಸಣ್ಣಕೆ ಕಂಪಿಸಿದ್ದು ಉಂಟು! ಪರಿಶುದ್ಧ ಕೊಬ್ಬರಿ ಎಣ್ಣೆಯ ಪರಿಮಳವಂತೂ ನೆನಪಿಸುವುದು ಸುಬ್ಬಿ ಅಜ್ಜಿಯನ್ನು .   ಸರಿಯಾಗಿ ಹತ್ತು ಗಂಟೆಗೆ ಸಣ್ಣ ಡಬ್ಬಿ ಕೊಬ್ಬರಿ ಎಣ್ಣೆಯನ್ನು , ಪುಟ್ಟ ಬಟ್ಟೆಯ ಚೀಲ ಅದರಲ್ಲಿ ಆಕೆ ಹಣಿಗೆ , ಮತ್ತೊಂದು ಡಬ್ಬಿ , ಅದರಲ್ಲಿ ಬಟ್ಟು , ಇವನ್ನೆಲ್ಲ ತೆಗೆದುಕೊಂಡು ಮನೆಯ ಜಗುಲಿಯಲ್ಲಿ ಕೂತು ೨ ಬಿಂದು ಎಣ್ಣೆಯನ್ನು ನೆತ್ತಿಗೆ ಹಾಕಿ   ಜಡುಕು ತೆಗೆದು ಸಣ್ಣ ತುರುಬು ಕಟ್ಟಿ , ಬಿದ್ದ ತಲೆ ಕಸವನೆಲ್ಲ ತೆಂಗಿನ ಬುಡಕ್ಕೆ ಹಾಕಿ ಕೈಯೊಂದನ್ನು ಹಣೆಗೆ ಇಟ್ಟು ದಾರಿಯನ್ನು ಯಾರನ್ನೋ ನಿರೀಕ್ಷಿಸುವಂತೆ   ನೋಡುತ್ತಾಳೆ. ಯಾರು ಕಾಣದಿದ್ದಾಗ ಒಳಗೆ ಹೋಗುವಳು. ಅಷ್ಟರಲ್ಲಿ ಪುಳ್ಳಿ ಬಂದು ತಿನ್ನಲು ಏನಾದರೂ ಕೊಡು ಎಂದು ಕೇಳಿದಾಗ ಮನೆ ಬಿಟ್ಟು ಎಲ್ಲಿಯೂ ಹೋಗದ ಸ...

ಮಹಾನಗರಿಗೆ ಮರುಳಿದ ಮತ್ತೆಯೂ ಮುಸ್ಸಂಜೆ ದೀಪದ ಎದುರು ಕೂತಾಗ ಕಾಡುವ ನೆನಪುಗಳು...

Image
ಹೊಟ್ಟೆಪಡಿಗಾಗಿ ಮಹಾನಗರಿಗಳಲ್ಲಿ ಬಿಡಾರ ಹೂಡಿರುವ ನಮಗೆ ಹಬ್ಬ ಹರಿದಿನಗಳಿಗೆ ಊರಿಗೆ ಹೋದಾಗ ಹೆಚ್ಚಿಗೆ ಸಮಯ ಸಿಕ್ಕಿದ ಅನುಭವ ಆಗುವುದು ಸಹಜ. ಅದಲ್ಲದೆ ಕಳೆದುಕೊಂಡದನ್ನು ಮತ್ತೆ ಪಡೆದು ಬೆಸೆದುಕೊಂಡ ಭಾವ. ಬಸ್ಸಿಂದ ಇಳಿದು ಮನೆಗೆ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಸಿಗುವ ದೊಡ್ಡ ಗಡಿಯಾರ ಕಂಬ , ಅದೇ ಹಳೆಯ ಕಟ್ಟಡಗಳು , ತಾಲೂಕು ಮೈದಾನ   ಹೀಗೆ ಇವೆಲ್ಲವೂ ಪಿಸುಮಾತಿನಲ್ಲಿ ಅಲ್ಲಿ ಕಳೆದ ಕ್ಷಣಗಳನ್ನು ನೆನಪಿಸಿದಂತೆ ಭಾಸವಾಗಿ ಮುಗುಳುನಗೆ ಮುಖವನ್ನು ಅರಳಿಸಿದ್ದು ಉಂಟು. ಮುಸ್ಸಂಜೆಯ ದೀಪ ಹೊತ್ತಿಸಿ ಮನೆಯ ಜಗುಲಿಯಲ್ಲಿ ಕೂತು ಅಪ್ಪ ಅದೇನೋ ಆಲೋಚನೆಯಲ್ಲಿದ್ದಾಗ ನಾನು ಅವರೊಟ್ಟಿಗೆ ನಡೆಸುತ್ತಿದ್ದ ಸಂಭಾಷಣೆಗಳು ಮನೆ ಬಿಟ್ಟು ಮರಳಿದ ಮತ್ತೆಯೂ ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತದೆ. ಪೂರ್ಣಿಮೆಯ ಬೆಳಕು , ಕುಟುರ್ ಪಕ್ಷಿಯ ಸದ್ದು , ಮಿಣುಕು ಹುಳ , ಅಪ್ಪನ ಬೆಚ್ಚಗಿನ ಮಡಿಲು , ತಂಪು ಗಾಳಿ ... ನಾನು: ಏನು ಯೋಚನೆ ಅಪ್ಪ ? ಅಪ್ಪ:   ನಿಮಗೆ ಇಷ್ಟು ಒಳ್ಳೆ ಪರಿಸರ ಸಿಗಲ್ಲ ಅನ್ನೋ ಯೋಚನೆ ಅಷ್ಟೆ. ನಾನು: ಹೌದು ಅಪ್ಪ. ನಮಿಗೆ ಅದು ಸಾಧ್ಯ ಆಗೋದು ಕಷ್ಟನೆ ಅಲ್ವ ಅಪ್ಪ ?! ಅಪ್ಪ:   ಈಗ ನಾವು ಅನುಭವಿಸುತ್ತಿರುವ ಈ ಜಾಗವನ್ನು ಯಾವುದೋ ಬ್ಯಾಂಕ್ ಸ್ವಂತ ಕಟ್ಟಡ ನಿರ್ಮಿಸಲು ಕೇಳಿತ್ತು. ಒಂದೊಂದು ಪೈಸೆಗು ಕಷ್ಟ ಇದ್ದ ಆ ದಿನಗಳಲ್ಲಿಯೂ ಇದನ್ನು ಮಾರಾಟ ಮಾಡಲು ನನ್ನ ಮಾವ ಬಿಡಲಿಲ್ಲ. ನಾನು: ಯಾಕಪ್ಪಾ ? ...