Posts

ಆಕೆ ನಡೆದ ಹಾದಿಯಲ್ಲಿ ಮಲ್ಲಿಗೆ ಹೂಗಳು ಅರಳಿದ್ದವು ........

Image
 ಈ ಕಿಡಕಿಯಲ್ಲಿ ಕೂತು ನಾವಿಬ್ಬರು ಅದೆಷ್ಟು ನಕ್ಕಿದ್ದೆವೊ, ಕೆಳಗೆ ಬಿದ್ದಿದ್ದೇನೇ ಕೂಡ. ಹಾಗೆ ಬಿದ್ದಾಗ ಆಕೆ ಗಾಬರಿಯಿಂದ ಕೈ ಹಿಡಿದು ಮೇಲೆತ್ತಿದ್ದಾಳೆ, ಅಲ್ಲೇ ಪೆಟ್ಟು ಕೊಟ್ಟು ನಕ್ಕಿದ್ದಾಳೆ, ತಾನೂ ಕೆಳಗೆ ಬಂದು ಮುಖವನ್ನೆ ನೋಡಿದ್ದಾಳೆ ಅವಳೊಂದಿಗಿನ ನೆನಪುಗಳು ಅವಳಷ್ಟೇ ಸುಂದರ.  ನಾನು ನನ್ನ ಉನ್ನತ ಶಿಕ್ಷಣಕ್ಕಾಗಿ ಮನೆ ಬಿಟ್ಟಿದ್ದೆ. ಸ್ನೇಹಿತರ ಸಹಾಯದಿಂದ ಕಾಲೇಜಿಗೆ ಹತ್ತಿರವಾಗುವ ಹಾಗು ನನಗೆ ಸರಿ ಹೊಂದುವ ಈ ಮನೆಯನ್ನು ಸೇರಿಕೊಂಡೆ. ಆ ಮನೆಯ ಮೇಲೆ ಇದ್ದ ಕೋಣೆಯನ್ನು ನನಗೆ ಕೊಟ್ಟಿದ್ದರು. ಅದು ಹಳೆಕಾಲದ ದೊಡ್ಡ ಮನೆ,ಬಹಳ ಚಂದವಾಗಿ ಇಟ್ಟಿದ್ದರು.ನಾನು ಆದಷ್ಟು ಮನೆಯ ಒಡತಿ ಆದ ಯಶೋದಮ್ಮನವರನ್ನು ಮಾತನಾಡಿಸಲು ಹೋಗುತ್ತಿರಲಿಲ್ಲ, ನನ್ನ ಮನೆಯ ಕಥೆ, ಅಥವಾ ಆಸ್ತಿ ಪಾಸ್ಥಿಯ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕೊಡುವ ವ್ಯವಧಾನ ನನಗೆ ಇರಬೇಕಲ್ಲ!ಆಶ್ಚರ್ಯವೆಂದರೆ ಅವರು ಕೂಡ ನನ್ನ ತಂಟೆಗೆ ಬರುತ್ತಿರಲಿಲ್ಲ. ಅದೊಂದು ದಿನ ಕಾಲೇಜ್ ಬೇಗ ಮುಗಿದಿತ್ತು , ಸೀದ ಮನೆಗೆ ಬಂದು ತುಸು ಹೊತ್ತು ಮಲಗೋಣ ಅನ್ನಿಸಿತು.ಮಲಗಿದರೆ ಸರಿಯಾಗಿ ನಿದ್ರೆ ಬರಲಿಲ್ಲ, ಇಲ್ಲ ಸಲ್ಲದ ಯೋಚನೆಗಳು ಒಂದೊಂದಾಗಿ ಹಾಜಾರಾತಿ ಹಾಕುತ್ತಿದ್ದವು. ಎದ್ದು ಹೊರಗೆ ಬಂದೆ, ಕೆಲ ಸರಕಾರಿ ಶಾಲಾ ಮಕ್ಕಳು ಬರುತ್ತಿರುವುದನ್ನು ಕಂಡೆ, ಕೆಲ ಸಣ್ಣವು ಮತ್ತೆ ಕೆಲ ದೊಡ್ಡವು, ಏನೆಂದು ನೋಡ ಹೋದೆ.ಆ ಮಕ್ಕಳೆಲ್ಲ ಮನೆಯ ಇನ್ನೊಂದು ಭಾಗದ ಕಡೆಗೆ ಹೋಗುತ್ತಿದ್ದರು. ನಾನು ತುಸು ಹ...

ಭ್ರಮನಿರಸನ

Image
    ವಿಶ್ವವಿದ್ಯಾನಲಯದ ಎದುರು ಇದ್ದ ಬಸ್ ನಿಲ್ದಾಣದಲ್ಲಿ  ನಿಂತು ಸಮಯ ನೋಡಿಕೊಂಡಳು 4:30 ಕಳೆದಿತ್ತು. ಮರುದಿನ  ಅವಳ ಗೆಳತಿಯ ಅಣ್ಣನ ಮದುವೆ, ಇವಳು ದಿನ ಮುಂಚಿತವಾಗಿ ಬರಲೇಬೇಕೆಂದು ಅವಳ ಗೆಳತಿ ಅದಾಗಲೇ ಒತ್ತಾಯ ಮಾಡಿದ್ದಳು.ಇವರಿಬ್ಬರೂ ಒಂದೇ ಕೋಣೆಯಲ್ಲಿ 3 ವರ್ಷದಿಂದ ಜೊತೆಯಲ್ಲೇ ಇದ್ದವರು. ಹಿಂದಿನ ದಿನವಷ್ಟೇ ಮದುವೆಗೆ ತೆಗೆದುಕೊಂಡು ಹೋಗಲಿರುವ ಒಳ್ಳೆಯ ಬಟ್ಟೆ, ಬಳೆ, ಬೊಟ್ಟು,  ಹಣದ ಸಂಚಿ ಎಲ್ಲವನ್ನೂ ತಯಾರು ಮಾಡಿ ಇಟ್ಟಿದ್ದಳು. ಹೇಗೂ ಸಣ್ಣ ಪುಟ್ಟ ಖರೀದಿಗೆ ಗೆಳತಿಯ ಅಪ್ಪ ಅಮ್ಮ ಕಾರಿನಲ್ಲಿ ಬರುವವರಿದ್ದರು ಹಾಗಾಗಿ ಒತ್ತಾಯ ಮಾಡಿ ಈಕೆಯ ಕೈಚೀಲವನ್ನು ತೆಗೆದುಕೊಂಡು ಮತ್ತೆರಡು ದಿನದಲ್ಲಿ ಕಾಣುವ ಬಗ್ಗೆ ಮಾತನಾಡಿ ಗೆಳತಿ ಹೊರಟಿದ್ದಳು.  ಇದೆಲ್ಲ ಯೋಚನೆ ಮಾಡುತ್ತಿರುವಾಗ ಬಸ್ ಬಂದಿತು. ಬಸ್ ಹತ್ತಿ ಕೂತಳು, ,ಕ್ಷಣ ಮಾತ್ರದಲ್ಲಿ ಬಸ್ ತುಂಬಿ ಹೋಗಿತ್ತು.ಮುಂದಿನ 3-4 ಸ್ಟಾಪಿನಲ್ಲಿ ಇಳಿಯುವವರ ಟಿಕೆಟ್ ಹಣ ಪಡೆದು, ಬಸ್ ಸ್ವಲ್ಪ ಖಾಲಿಯಾದ ಮತ್ತೆ ಕುಳಿತವರ ಟಿಕೆಟ್ ಹಣಕ್ಕೆ ಕಂಡಕ್ಟರ್ ಬಂದಾಗ ತನ್ನ ಗೆಳತಿ ಮೊದಲೇ ಹೇಳಿದಂತೆ 15 ರೂಪಾಯಿ ಕೊಟ್ಟು ಕಾಲೇಜಿನ ಗುರುತಿನ ಚೀಟಿ ತೋರಿಸಿದಳು, ಅವನು ಏನು ಮಾತನಾಡದೇ ಮುಂದೆ ಹೋದ. ನಾಳಿನ ಮದುವೆ , ಅಲ್ಲಿ ತನ್ನ ಗೆಳತಿ ಹಾಗೂ ತಾನು ಮಾಡಲಿರುವ ತಲೆಹರಟೆ ಕೆಲಸಗಳು, ಅಣ್ಣನನ್ನು ಹೇಗೆಲ್ಲಾ ಕಾಡಬೇಕು ಎಂದು ಹಾಕಿದ ಯೋಜನೆಗಳು ಹೀಗೆ ನೂರೆಂಟು ಯೋಚನೆ ಇವಳಿಗೆ.ಅರ...

ಅಕ್ಕಿ ಕಾಳಿನ ಮೇಲೆ ಹೆಸರು ಬರೆದಳೆ ಸೀತು...?!

Image
ಉಣಗಲು ದಾಟಿ 5 ನಿಮಿಷ ನಡೆದುಕೊಂಡು ಹೋಗಬೇಕು ಅವನ ಅಜ್ಜನ ಮನೆ ತಲುಪಲು. ದಾರಿಯುದ್ದಕ್ಕೂ ಅರಳಿ ನಿಂತ ತರಾವರಿ  ದಾಸವಾಳದ ಹೂಗಳು ಅದರೊಂದಿಗೆ ಅಲ್ಲಿ ಅಲ್ಲಿ ಇರುವ ಗಂಧ ಸಾಲೆಯ ಪರಿಮಳ, ಹಕ್ಕಿಯ ಕೂಗು, ಅದರೊಂದಿಗೆ ಬರುವ ಬಾಲ್ಯದ ನೆನಪುಗಳು..   ಇವನ್ನೆಲ್ಲ ಚಿಂತೆಗಳನ್ನು ಮರೆಸಿ ಮನೆ ತಲುಪುವಷ್ಟರಲ್ಲಿ ತುಸು ಸಮಾಧಾನ ಕೊಡುತ್ತಿತ್ತು. ಮನೆಗೆ ಹೋದರೆ ಅಲ್ಲಿ ಈಗ ಇರುವುದು ಅವನ ಸೀತು ಮಾತ್ರ. ಅವನು ಆರು ತಿಂಗಳ ಮಗುವಾಗಿ  ಇದ್ದಾಗಿನಿಂದ ಅವನನ್ನು ನೋಡಿಕೊಂಡ, ದೂರದ ಅತ್ತೆಯು ಹೌದು. ಮನೆ ತಲುಪಿದ ಕೂಡಲೇ ಬಿಸಿ ನೀರ ಸ್ನಾನ,100ವರ್ಷ ಹಳೆಯ ಈ ಬಚ್ಚಲು ಮನೆಯಲ್ಲಿ ಸದಾ ಕಾಲ ಬಿಸಿ ನೀರಿನಿಂದ ತುಂಬಿರುವ  ಪಳ ಪಳ ಹೊಳೆಯುವ ಹಂಡೆ, ಮಂದ ಬೆಳಕು, ಮೈ ಒರೆಸಿಕೊಳ್ಳಲು ಅವನ ಸೀತು ಕೊಡುತ್ತಿದ್ದ ಪರಿಮಳದ ಬೈರಾಸು ಇವೆಲ್ಲ ಕೊಡುತ್ತಿದ್ದ ಕುಶಿ ,ತನ್ನ ಪೇಟೆಯ ಮನೆಯ ಆಧುನಿಕ ತಂತ್ರಜ್ಞಾನದ  ಬಚ್ಚಲು ಮನೆ ಕೊಡಲು ಸಾಧ್ಯವಿಲ್ಲ ಎಂದು ಅವನಿಗೆ ಅನಿಸುತ್ತಿತ್ತು.     ಪ್ರತಿ 2/3 ತಿಂಗಳಿಗೊಮ್ಮೆ ಅಜ್ಜನ ಮನೆಗೆ ಬಂದು, ಅವನು ತೋಟದ ಕೆಲಸ ನೋಡಿಕೊಳ್ಳುತ್ತಿದ್ದ, ಪತ್ನಿ ಹಾಗೂ ಸೀತು ಹಲಸಿನ ಹಣ್ಣು ಕೊರೆದು, ಸೊಳೆಗಳನ್ನು ಬೇರ್ಬಡಿಸುವುದು, ಗೇರುಬೀಜ ಹೆಚ್ಚುವುದು, ಪುನರ್ಪುಳಿ ಕೊಚ್ಚಿ ಬಿಸಿಲಿನಲ್ಲಿ ಒಣಗಿಸುವುದು ,ಹಪ್ಪಳ ಸಂಡಿಗೆ, ಬೆರಟ್ಟಿ, ಮಾಂಬ್ಳ, ಚಕ್ಕುಲಿ ಮುಂತಾದವುಗಳನ್ನು ಮಾಡುವುದು. ಸೀತುವಿಗೆ...

ಆಶಯ

Image
   ದಿನವೂ ಬಸ್ಸಿಂದ ಇಳಿದು , ರಸ್ತೆ ದಾಟುವಾಗ ಕಣ್ಣುಗಳನ್ನು ಸಣ್ಣ ಮಾಡಿ , ದಯವಿಟ್ಟು ನಿಧಾನಿಸಿ ಎಂಬಂತೆ ಮುಖವನಿಟ್ಟು   ವೇಗವಾಗಿ ಹೋಗುವ ವಾಹನಗಳನ್ನು ನಿಲ್ಲುವಂತೆ ಮಾಡುವ ಪುಟ್ಟ ಪ್ರಯತ್ನ ಇವಳದು. ಒಂದು ವೇಳೆ ನಿಲ್ಲಿಸಿದರೆ , ಅವರ ದಿನಚರಿ ಅದ್ಭುತವಾಗಿರಲ ಎಂದು ಮನಸಾ ಪ್ರಾರ್ಥಿಸುವಳು .ಹೀಗೆ ಮಾಡಿದಾಗ ನಿಲ್ಲಿಸುತ್ತಿದ್ದ ವಾಹನಗಳು ಕೆಲವೇ ಕೆಲವು ಮಾತ್ರ. ರಸ್ತೆಯ ಇನ್ನೊಂದು ಕಡೆ ಇರುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಈಕೆ. ವಾಹನ ಚಲಾಯಿಸುತ್ತಿರುವ ಯಾರೇ ಇವಳನ್ನು ನೋಡುವ ವ್ಯವಧಾನ ತೋರಿದ್ದರೆ , ಶಾಲೆಗೆ ಹೋಗುವ ಮಗುವೇನೋ ಅಂದುಕೊಳ್ಳುವಂತಹ ಮುಗ್ಧ ಮುಖ ಇವಳದು.ಹೀಗೆ ಒಂದು ದಿನ ವಾಹನ ನಿಲ್ಲಿಸಿದ ಇವನಿಗೆ ಇವಳ ಮುಗ್ಧತೆ ತುಂಬಾ ಇಷ್ಟವಾಗಿತ್ತು. ಅಷ್ಟೇ ಅಲ್ಲದೆ ಆ ದಿನ ಅವನು ಕನಸಿನಲ್ಲಿಯೂ ಯೋಚಿಸಲು ಅಸಾಧ್ಯವಾದ ಒಂದೊಳ್ಳೆ ಬೆಳವಣಿಗೆ ಅವನ ವ್ಯವಹಾರದಲ್ಲಿ ಆಗಿತ್ತು.ಅಂದಿನಿಂದ ಪ್ರತಿನಿತ್ಯ ಆಕೆ ರಸ್ತೆ ದಾಟುವ ಸಮಯಕ್ಕೆ ಸರಿಯಾಗಿ ಅಲ್ಲಿ ತಲುಪುತ್ತಿದ್ದ. ಒಂದು ವೇಳೆ ಬೇಗ ತಲುಪಿದರು ಆಕೆಯ ಬರುವಿಕೆಗೆ ಕಾಯುತ್ತಿದ್ದ. ಆಕೆಯ ಮುಗ್ಧ ಮುಖ ಅವನಲ್ಲಿ ಸಮಾಧಾನ ತರುತ್ತಿತ್ತು. ಆಕೆ ತುಂಬು ಮನಸ್ಸಿನಿಂದ ಒಳ್ಳೆಯದು ಆಗಲೆಂದು ಹಾರೈಸಿದಂತೆ ಅನಿಸುತ್ತಿತ್ತು ಕೂಡ. ಅವಳಿಗೂ ಅದೆಷ್ಟು ರೂಢಿ ಆಗಿತ್ತು ಅಂದರೆ ಈಗೆಲ್ಲ ಮುಖವನ್ನು ಸಣ್ಣ ಮಾಡಿ ಸೀದ ರಸ್ತೆ ದಾಟಿ ಹೋಗುವಳ , ಕಿರು ನಗುವೊಂದನ್ನು   ಬೀರುತ್ತಾ. ಅಂದು ...

#48, ಸಿರಿ ದೇವ ಮತ್ತು ಗಾಜಿನ ಜಾಡಿಗಳು

Image
ಅದು ಮಬ್ಬುಗತ್ತಲೆಯ ಕೋಣೆ. ಇಡಿಯ ವಿದ್ಯಾರ್ಥಿ ನಿಲಯದಲ್ಲಿ ಹೆಚ್ಚಿನ ಸೌಲಭ್ಯ ಸಿಗುವ ಏಕಮಾತ್ರ ಕೋಣೆ #48. ನನ್ನ ಅದೃಷ್ಟ ಅಲ್ಲಿ ಸೇರಿಕೊಂಡೆ ಅಲ್ಲಿ ಮೊದಲೇ ಬಿಡಾರ ಹೂಡಿದ್ದ ಸಿರಿ ದೇವ ನನಗೆ ಕೋಣೆಯ ವಿಶೇಷತೆಗಳನ್ನು ಹೇಳಿದಳು.ಕೋಣೆಯ ಒಂದು ಮೂಲೆ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿತ್ತು. ಹಾಗಾಗಿ ಅಲ್ಲಿ ಯಾರೂ ಜಾಂಡ ಊರುವ ಹಾಗಿರಲಿಲ್ಲ ಇದರಿಂದ ಅಲ್ಲಿ ಇಬ್ಬರಿಗೆ ಮಾತ್ರ ಅವಕಾಶ ,ಇದು ಮತ್ಯಾವ ಕೊಣೆಯಲ್ಲು ಸಿಗದು. ಇನ್ನು ಹೀಗೆ ಮಳೆಯ ನೀರಿನಿಂದ ತುಕ್ಕು ಹಿಡಿದ ಕಂಬಿಯ ಕಿಡುಕಿಯನ್ನು ಸ್ಲೈಡಿಂಗ್  ವಿಂಡೋವಾಗಿ ಮಾರ್ಪಾಟು ಮಾಡಿದ್ದರು. ಯಾವುದೋ ಖಾಸಗಿ ದ್ವೀಪದ, ಗಗನಚುಂಬಿ ವಸತಗೃಹದ ತುತ್ತ ತುದಿಯ ಕೋಣೆಯ ಕಿಡುಕಿಯಂತೆ ನಮಗೆ ಅನ್ನಿಸುತ್ತಿತ್ತು ಅದಕ್ಕೆ ಕಾರಣ ಈ ಕಿಡುಕಿ ತಳ್ಳಿದಾಗ, ಆಕಾಶ, ಸಂಪೂರ್ಣ ಹಸಿರು ಮರಗಳು ,ಪಕ್ಷಿಗಳು, ಅಳಿಲುಗಳು ಇವೆಲ್ಲ ಕಾಣ ಸಿಗುತ್ತಿದ್ದವು. ಮಾರ್ಗ ಬದಿಯಾಗಿರದ ಕಾರಣ ವಾಹನದ ಸದ್ದುಗದ್ದಲವೂ ಇರುತ್ತಿರಲಿಲ್ಲ. ಒಟ್ಟಿನಲ್ಲಿ ನಮ್ಮ ಇಂದ್ರಲೋಕವೆ ಇದಾಗಿತ್ತು.   ಸದಾ ನಗು - ಕುಶಿ, ಯಾವ ಚಿಂತೆಯೂ ಇಲ್ಲಿ ಇರುತ್ತಿರಲಿಲ್ಲ, ಹಾಗೆ ಬಂದರು ಅವುಗಳು ನೀರ ಮೇಲಿನ ಗುಳ್ಳೆಗಳಂತೆ. ಬೆಳ್ಳಂಬೆಳಗ್ಗೆ ಎದ್ದು ಬಿಸಿನೀರು ಮಾಡುವ ಕೆಲಸ ನನಗಾದರೆ ಅಂದಿನ ಧಿರಿಸಿನ ಇಸ್ತ್ರಿ ಕೆಲಸ ಸಿರಿಯದ್ದು. ಇನ್ನು ಮೆಸ್ಸಿನಲ್ಲಿ ಇಬ್ಬರಿಗು ತಿಂಡಿ ಬಡಿಸಿ ತರುವ ಕೆಲಸ ನನ್ನದು ಮತ್ತು ನೀರಿನ ಕುಪ್ಪಿ ತುಂಬಿಸುವ ಕೆಲಸ ಸಿರಿಯದ್...

ನಿರ್ಧಾರ

Image
ಒಂದಾನೊಂದು ಕಾಲದಲ್ಲಿ ರಾಜಧಾನಿಯಾಗಿದ್ದ ಊರು ರಾಜಪಟ್ಣ. ಹಾಗಾಗಿ ಕೆಲ ದಶಕಗಳ ಹಿಂದೆ ಇಲ್ಲಿನ ಜನರು ನಿಧಿಯ ಆಸೆಗೆ ಅದೆಷ್ಟೋ ಭೂಮಿಯನ್ನು ಅಗಿದು ತಮ್ಮ ಅದೃಷ್ಟ ಪರೀಕ್ಷಿಸಿದ್ದು ಉಂಟು. ಅದರಲ್ಲಿ ಕೆಲವೇ ಕೆಲವರಿಗೆ ಲಕ್ಷ್ಮಿ ಒಲಿದಿದ್ದಾಳೆ ಎಂದು ಗುಮಾನಿಗಳಿವೆ.      ಇದರ ವ್ಯಾಪ್ತಿಗೆ ಬರುವ ಗೌರ, ಕಾಡು, ಪಕ್ಷಿ ಪ್ರಪಂಚ, ಶುದ್ಧ ನೀರಿನ ನದಿ ಇವೆಲ್ಲ ಇರುವ ಸಮೃದ್ಧವಾದ ಗ್ರಾಮ. ಶಂಭು ಭಟ್ಟರ ಮನೆ, ೩೦೦ ಬಟ್ಟಿ ಭೂಮಿ, ಹತ್ತು ಎಕರೆ ಗುಡ್ಡೆ ಇದ್ದದ್ದು ಇದೇ ಗೌರದಲ್ಲಿ. ಭಟ್ಟರು ಪುಸ್ತಕದಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಅದರಲ್ಲಿ ಬರುತ್ತಿದ್ದ ಸಂಬಳ ಹಾಗೂ ಸಣ್ಣ ಪುಟ್ಟ ಕೃಷಿಯಿಂದ ಬರುತ್ತಿದ್ದ ಹಣದಿಂದ ಮಡದಿ ಲಕ್ಷ್ಮಮ್ಮ ಹಾಗೂ ನಾಲ್ಕು ಮಕ್ಕಳ ಸಂಸಾರ ಮುಂದೆ ಸಾಗಿತ್ತು. ಸ್ವಾತಂತ್ರ ದಿನಾಚರಣೆಯಂದು ಭಟ್ಟರು ಚೌಚೌ ಹಾಗೂ ಜಿಲೇಬಿ ತರುತ್ತಿದ್ದರು ಅಂದು ಎಲ್ಲ ಮಕ್ಕಳು ಚೀರುತ್ತಾ ಕೇಕೆ ಹಾಕುತ್ತಾ ಸಂಭ್ರಮಿಸುತ್ತಿದ್ದರು. ಅದಲ್ಲದೆ ತಿಂಗಳಿಗೊಮ್ಮೆ ಮಾತ್ರ ಮಾಡುವ ಚಾಯ , ಆರು ತಿಂಗಳಿಗೊಮ್ಮೆ ಮಾಡುವ ಉಪ್ಪಿಟ್ಟು, ಚಪಾತಿಗು ಇದೆ  ಸಂಭ್ರಮವಿರುತ್ತಿತ್ತು.ಅಮ್ಮನವರು ಕೂಡ ನರೆಯಲ್ಲಿದ್ದ ತಮ್ಮನ ಕುಟುಂಬ ಹಾಗೂ ಅವರ ಮಕ್ಕಳನ್ನು ತಮ್ಮ ಮಕ್ಕಳಷ್ಟೇ ಪ್ರೀತಿಸುತ್ತಿದ್ದರು. ಶಂಭು ಭಟ್ಟರು ಒಬ್ಬನೇ ಮಗನಾದದ್ದರಿಂದ ಅವರ ಅಣ್ಣ ತಮ್ಮಂದಿರು ಇರಲಿಲ್ಲ.ಆಸ್ತಿ ಅಂತಸ್ತಿನಲ್ಲಿ ಬಡತನವಿದ್ದರೂ ಹೃದಯ ಶ್ರೀಮಂತರಾಗಿದ್...

ಸಂತೃಪ್ತಿ

Image
ಜೋಯಿಸರು ಜೇನು ಸಂಶೋಧನ ಕೇಂದ್ರದಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಜ್ಜಯಿನಿ ಇಂದ ಮೂಡಿಗೆರೆವರೆಗೆ ಅನೇಕ ರಾಜ್ಯಗಳಲ್ಲಿ ಸೇವೆಸಲ್ಲಿಸಿದ್ದರಲ್ಲದೆ ಅಲ್ಲಿಯ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಜೇನು ಉತ್ಪಾದನೆಗೆ ನೂರು ಲೀಟರ್ ಗುರಿಯೆಂದು ನೀಡಿದ್ದರೆ ಜೋಯಿಸರು ನೂರೈವತ್ತು ಇನ್ನೂರು ವರೆಗೂ ತಲುಪುತ್ತಿದ್ದರು. ಸರಕಾರಿ ಕೆಲಸವಾದರೂ ಬೆಳ್ಳಂ ಬೆಳಗ್ಗೆ ನಾಕು ಗಂಟೆಯ ಚಳಿಯನ್ನು ಲೆಕ್ಕಿಸದೆ , ತಣ್ಣೀರು ಸ್ನಾನ , ದೇವರ ಪೂಜೆ ಮಾಡಿ, ಜೇನು ಪೆಟ್ಟಿಗೆಗಳನ್ನು ಸರಿಯಾದ ಸ್ಥಳಕ್ಕೆ ರವಾನಿಸುವ ಕೆಲಸವನ್ನು ತಾವೇ ಖುದ್ದಾಗಿ ನಿಂತು ಮಾಡಿಸುತ್ತಿದ್ದರು. ಅವರ ಈ ನಿಸ್ವಾರ್ಥ ಸೇವೆಯಿಂದ ಅಲ್ಲಿನ ಸೊಸೈಟಿಗೆ ಒಳ್ಳೆಯ ಹೆಸರು ಬರುತ್ತಿತ್ತು ಅಲ್ಲದೆ ವರ್ಷದ ಲಾಭದಲ್ಲಿ ಸಣ್ಣ ಒಂದು ಭಾಗವು ಇನಾಮಾಗಿ ಎಲ್ಲಾ ಕೆಲಸಗಾರರಿಗೆ ಲಭಿಸುತ್ತಿತ್ತು.ಹೀಗೆ ಕಾಯಕವೇ ಕೈಲಾಸ ಎಂದು ಜೋಯಿಸರು ನಂಬಿದ್ದರು. ಅವರಿಗೆ ನಾಗಾಲ್ಯಾಂಡ್ಗೆ ವರ್ಗವಾದಗಲೂ ಹೋಗಲು ತಯಾರಿದ್ದರು  ಅಲ್ಲದೆ  ಅದನ್ನು ಪತ್ನಿಯೊಂದಿಗೆ ಹೇಳಿ ಬೇಕಾಗುವ ಸಿದ್ಧತೆ ಮಾಡಿಕೊಳ್ಳಲು ಸೂಚನೆ ಕೊಟ್ಟರು.   ಜೋಯಿಸರ ಮಡದಿ ತ್ರಿಪುರ ಸುಂದರಿ ಅಮ್ಮನವರು. ಹೆಸರಿಗೆ ತಕ್ಕಂತೆ ಬಹಳ ಲಕ್ಷಣವಾಗಿದ್ದರು. ಆಕೆ ಬಹಳ ಮುಂದಾಲೋಚನೆ ಇಂದ ಯೋಚಿಸುವವರು. ನಾಗಾಲ್ಯಾಂಡ್ಗೆ ಹೋಗಲು ನಾಲ್ಕು ಜನ ಮಕ್ಕಳನ್ನು ಕಟ್ಟಿಕೊಂಡೇ ಹೋಗಬೇಕು , ಅಲ್ಲಿ ಶಾಲೆ ಹೇಗೋ ಏನೋ ? ಇನ್ನೂ ಊಟ...