Posts

ಬಿತ್ತಿದ್ದು

Image
 ಗಡಿಯಾರದ ಗೂಡಿನಿಂದ ಹೊರಬಂದ ಜೋಡಿಹಕ್ಕಿಗಳು ೧೨ ಬಾರಿ ಕೂಗಿ ಒಳ ಹೋದವು. ಹಾಸಿಗೆಯಲ್ಲಿ ಹೋಣಕುತ್ತ ಇದ್ದ ಚಾಮಿ, ಹೊದಕೆ ತೆಗೆದು ಕಣ್ಣು ಮುಚ್ಚಿ - ಹಲ್ಲು ಕಚ್ಚಿ, ಒಡೆದ ಪಾದಗಳನ್ನು  ಕೆಳಗೆ ಇರಿಸಿ ನಿಟ್ಟುಸಿರು ಬಿಟ್ಟು ಅಡುಗೆ ಮನೆಗೆ ನಡೆದ. ಎಂದಿನಂತೆ ಚಾ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು, ಹಾಲು ಚಾ ಹುಡಿ ಹಾಕಿದ. ತನ್ನ ಕೊರಳು ನೋವಿಗೆ ಮೂಲಾಮೊಂದನ್ನು ಹಚ್ಚಿ, ಕೈ ತೊಳೆದು ಚಾ ಒಂದೆರಡು ಬಾರಿ ಮೇಲೆ ಕೆಳಗೆ ಸುರಿದ, ಶುಂಠಿ- ಏಲಕ್ಕಿ ಗುದ್ದಿ ಕುದಿಯುವ ಚಾಯಕ್ಕೆ ಬೆರೆಸಿ ಲೋಟಕ್ಕೆ ಹಾಕುವಷ್ಟರಲ್ಲಿ ಹಿಂದಿನಿಂದ " ನಂಗೂ ಒಂದು ಲೋಟ ಚಾ ಸಿಗ್ಬೋದ ಅಜ್ಜ ?!" ಚಾಮಿ : ಗಂಟೆ ೧೨ , ನಿದ್ದೆ ಬರ್ತ ಇಲ್ವಾ ಮಗು ? ಇಷ್ಟು ಹೊತ್ತಿಗೆ ಚಾ ಒಳ್ಳೇದು ಅಲ್ಲ ಆದ್ರೂ ಇವತ್ತು ಒಂದು ದಿನ ಕುಡಿ ತೊಂದ್ರೆ ಇಲ್ಲ. ಮೊಮ್ಮಗಳು : (ಜೋರಾಗಿ ನಕ್ಕು ) ನೀನು ಪ್ರತಿ ದಿನ ಕುಡಿತ್ಯ ? ಒಳ್ಳೇದು ಅಲ್ಲ ಅಂತ ಗೊತ್ತಿದ್ರೂ ?! ಯಾಕೆ ಅಜ್ಜ ಚಾಮಿ : ಏನ್ ಮಾಡ್ಲಿ ಚಿಂತೆ , ರಾತ್ರಿ ನಿದ್ರೆ ಬರೋಲ್ಲ ಕಣೆ! ಮೊಮ್ಮಗಳು : (ಮತ್ತೊಮ್ಮೆ ಜೋರಾಗಿ ನಕ್ಕು) ಚಿಂತೆ? ಏನು ಚಿಂತೆ? ಚಿಂತೆ ಇಲ್ಲದೆ ಇರೋದೆ ಚಿಂತೆ ನಿಂಗೆ !! ಚಾಮಿ : ಹೌದು ಕಣೆ , ನಿಂಗೆ ಎಲ್ಲಿ ಅರ್ಥ ಆಗುತ್ತೆ ಹೇಳು ನನ್ನ ಕಷ್ಟ ?! ನಿಂಗೆ ಎಲ್ಲಾ ತಮಾಷೆ ಅಲ್ವಾ? ಮೊಮ್ಮಗಳು : ಮತ್ತೇನು ಸುಮ್ನೆ ಮಲ್ಕೊಳೋದು  ಬಿಟ್ಟು ಮಧ್ಯರಾತ್ರಿ ಚಾ ಕುಡಿಯೋದು ಯಾವ ಚಿಂತೆ ಪರಿಹಾರಕ್ಕೆ?! ಇರ್ಲಿ ಬಾ ಚಂ...

ಲೋಕೊ ಭಿನ್ನ ರುಚಿಃ.

Image
  ಎಂದಿನಂತಯೇ ಆಫೀಸ್ ಕೆಲಸ ಮುಗಿಸಿ, ಮನೆಗೆ ಬಂದು ಬಾಗಿಲು ತೆಗೆದಾಗ, ಆಕೆಯ ಕೈಚೀಲ ಸೋಫಾದ ಮೇಲೆ ಇತ್ತು, ಆಕೆ ಸೋಫಾದ ಕೆಳ ಕೂತಿದ್ದಳು.ಇಂದು ಯಾವ ವಿಷಯ ಇರಬಹುದು ಎಂದು ಮನಸಿನಲ್ಲಿ ಯೋಚಿಸುತ್ತ,ಆಕೆಯ ಹತ್ತಿರ ಹೋಗಿ ಇವನು ಕೂತನು.ಮಂಕಾದ ಕಣ್ಣುಗಳು, ಇನ್ನೇನು ಕಣ್ಣಿನಿಂದ ಮುತ್ತು ಉದುರುವುದು ಒಂದೇ ಬಾಕಿ ಇದ್ದ ಹಾಗೆ ಇತ್ತು. ಆಕೆ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ, ಹೇಗೆ ಕೇವಲ ಹೆಸರಿಗಾಗಿ, ಬಡ್ತಿಗಾಗಿ, ಅಧಿಕಾರಕ್ಕಾಗಿ ತನ್ನ ಸಹೋದ್ಯೋಗಿಗಳು ಕೆಲಸ ಮಾಡುತ್ತಿದ್ದದ್ದು, ತಾನು ಮಾಡಿದ ಕೆಲಸದ ಕೀರ್ತಿಯನ್ನು ಮತ್ಯಾರೋ ಪಡೆದುಕೊಂಡು, ಎಗ್ಗಿಲದೆ ಮೆರೆಯುತ್ತಿರುವ ರೀತಿ, ಸದಾ ಜೊತೆಯಲ್ಲೇ ಮಾತಾಡಿಕೊಂಡು, ಊಟ ಹಂಚಿಕೊಂಡು, ನಗುತ್ತಾ ಇರುವವರನ್ನು ಒಳ್ಳೆಯ ಸ್ನೇಹಿತರು ಎಂದು ಭಾವಿಸಿ ತಾನು ಅವರಲ್ಲಿ ತನ್ನ ನ್ಯೂನತೆಗಳನ್ನು ಹೇಳಿಕೊಂಡು ಆದ ಫಜೀತು ಎಲ್ಲವನ್ನೂ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದಳು!! ವಿಷಯ ಏನೆಂದು ಅದಾಗಲೇ ಅರ್ಥವಾಗಿತ್ತು ಇವನಿಗೆ, ಆತ ಮನೆಯ ಮುಂದೆಯೇ ಇದ್ದ ಉದ್ಯಾನವನಕ್ಕೆ ಕರೆದುಕೊಂಡು ಹೋದ,ಆಕೆ ಅದೇ ಚಪ್ಪೆ ಮುಖ ಮಾಡಿಕೊಂಡು ಕೂತಳು. ಉದ್ಯಾನವನ ಇಷ್ಟು ಚಂದ ಏಕಿದೆ ಅಂದರೆ ಅಲ್ಲಿ ಕಾಟು ಗಿಡಗಳಿಗೆ ಅವಕಾಶವೇ ಕೊಡಲ್ಲ ಮಾಲಿ, ಅವುಗಳನ್ನು ಬೇರು ಸಮೀತ ಕಿತ್ತು ಹಾಕುವರು.ಒಂದಕ್ಕಿಂದ ಒಂದು ಚಂದದ ಗುಲಾಬಿ, ದಾಸವಾಳ, ಸಂಪಿಗೆ ಬಣ್ಣ ಬಣ್ಣವಾದ ಹೂಗಳು; ಅದಕ್ಕೆ ನಾವು ಕೂಡ ಇಲ್ಲಿಗೆ ಬಂದು ಕೂರುತ್ತೇವೆ. ಹಾಗೆ ನಿನ್ನ...

ಆಕೆ ನಡೆದ ಹಾದಿಯಲ್ಲಿ ಮಲ್ಲಿಗೆ ಹೂಗಳು ಅರಳಿದ್ದವು ........

Image
 ಈ ಕಿಡಕಿಯಲ್ಲಿ ಕೂತು ನಾವಿಬ್ಬರು ಅದೆಷ್ಟು ನಕ್ಕಿದ್ದೆವೊ, ಕೆಳಗೆ ಬಿದ್ದಿದ್ದೇನೇ ಕೂಡ. ಹಾಗೆ ಬಿದ್ದಾಗ ಆಕೆ ಗಾಬರಿಯಿಂದ ಕೈ ಹಿಡಿದು ಮೇಲೆತ್ತಿದ್ದಾಳೆ, ಅಲ್ಲೇ ಪೆಟ್ಟು ಕೊಟ್ಟು ನಕ್ಕಿದ್ದಾಳೆ, ತಾನೂ ಕೆಳಗೆ ಬಂದು ಮುಖವನ್ನೆ ನೋಡಿದ್ದಾಳೆ ಅವಳೊಂದಿಗಿನ ನೆನಪುಗಳು ಅವಳಷ್ಟೇ ಸುಂದರ.  ನಾನು ನನ್ನ ಉನ್ನತ ಶಿಕ್ಷಣಕ್ಕಾಗಿ ಮನೆ ಬಿಟ್ಟಿದ್ದೆ. ಸ್ನೇಹಿತರ ಸಹಾಯದಿಂದ ಕಾಲೇಜಿಗೆ ಹತ್ತಿರವಾಗುವ ಹಾಗು ನನಗೆ ಸರಿ ಹೊಂದುವ ಈ ಮನೆಯನ್ನು ಸೇರಿಕೊಂಡೆ. ಆ ಮನೆಯ ಮೇಲೆ ಇದ್ದ ಕೋಣೆಯನ್ನು ನನಗೆ ಕೊಟ್ಟಿದ್ದರು. ಅದು ಹಳೆಕಾಲದ ದೊಡ್ಡ ಮನೆ,ಬಹಳ ಚಂದವಾಗಿ ಇಟ್ಟಿದ್ದರು.ನಾನು ಆದಷ್ಟು ಮನೆಯ ಒಡತಿ ಆದ ಯಶೋದಮ್ಮನವರನ್ನು ಮಾತನಾಡಿಸಲು ಹೋಗುತ್ತಿರಲಿಲ್ಲ, ನನ್ನ ಮನೆಯ ಕಥೆ, ಅಥವಾ ಆಸ್ತಿ ಪಾಸ್ಥಿಯ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕೊಡುವ ವ್ಯವಧಾನ ನನಗೆ ಇರಬೇಕಲ್ಲ!ಆಶ್ಚರ್ಯವೆಂದರೆ ಅವರು ಕೂಡ ನನ್ನ ತಂಟೆಗೆ ಬರುತ್ತಿರಲಿಲ್ಲ. ಅದೊಂದು ದಿನ ಕಾಲೇಜ್ ಬೇಗ ಮುಗಿದಿತ್ತು , ಸೀದ ಮನೆಗೆ ಬಂದು ತುಸು ಹೊತ್ತು ಮಲಗೋಣ ಅನ್ನಿಸಿತು.ಮಲಗಿದರೆ ಸರಿಯಾಗಿ ನಿದ್ರೆ ಬರಲಿಲ್ಲ, ಇಲ್ಲ ಸಲ್ಲದ ಯೋಚನೆಗಳು ಒಂದೊಂದಾಗಿ ಹಾಜಾರಾತಿ ಹಾಕುತ್ತಿದ್ದವು. ಎದ್ದು ಹೊರಗೆ ಬಂದೆ, ಕೆಲ ಸರಕಾರಿ ಶಾಲಾ ಮಕ್ಕಳು ಬರುತ್ತಿರುವುದನ್ನು ಕಂಡೆ, ಕೆಲ ಸಣ್ಣವು ಮತ್ತೆ ಕೆಲ ದೊಡ್ಡವು, ಏನೆಂದು ನೋಡ ಹೋದೆ.ಆ ಮಕ್ಕಳೆಲ್ಲ ಮನೆಯ ಇನ್ನೊಂದು ಭಾಗದ ಕಡೆಗೆ ಹೋಗುತ್ತಿದ್ದರು. ನಾನು ತುಸು ಹ...

ಭ್ರಮನಿರಸನ

Image
    ವಿಶ್ವವಿದ್ಯಾನಲಯದ ಎದುರು ಇದ್ದ ಬಸ್ ನಿಲ್ದಾಣದಲ್ಲಿ  ನಿಂತು ಸಮಯ ನೋಡಿಕೊಂಡಳು 4:30 ಕಳೆದಿತ್ತು. ಮರುದಿನ  ಅವಳ ಗೆಳತಿಯ ಅಣ್ಣನ ಮದುವೆ, ಇವಳು ದಿನ ಮುಂಚಿತವಾಗಿ ಬರಲೇಬೇಕೆಂದು ಅವಳ ಗೆಳತಿ ಅದಾಗಲೇ ಒತ್ತಾಯ ಮಾಡಿದ್ದಳು.ಇವರಿಬ್ಬರೂ ಒಂದೇ ಕೋಣೆಯಲ್ಲಿ 3 ವರ್ಷದಿಂದ ಜೊತೆಯಲ್ಲೇ ಇದ್ದವರು. ಹಿಂದಿನ ದಿನವಷ್ಟೇ ಮದುವೆಗೆ ತೆಗೆದುಕೊಂಡು ಹೋಗಲಿರುವ ಒಳ್ಳೆಯ ಬಟ್ಟೆ, ಬಳೆ, ಬೊಟ್ಟು,  ಹಣದ ಸಂಚಿ ಎಲ್ಲವನ್ನೂ ತಯಾರು ಮಾಡಿ ಇಟ್ಟಿದ್ದಳು. ಹೇಗೂ ಸಣ್ಣ ಪುಟ್ಟ ಖರೀದಿಗೆ ಗೆಳತಿಯ ಅಪ್ಪ ಅಮ್ಮ ಕಾರಿನಲ್ಲಿ ಬರುವವರಿದ್ದರು ಹಾಗಾಗಿ ಒತ್ತಾಯ ಮಾಡಿ ಈಕೆಯ ಕೈಚೀಲವನ್ನು ತೆಗೆದುಕೊಂಡು ಮತ್ತೆರಡು ದಿನದಲ್ಲಿ ಕಾಣುವ ಬಗ್ಗೆ ಮಾತನಾಡಿ ಗೆಳತಿ ಹೊರಟಿದ್ದಳು.  ಇದೆಲ್ಲ ಯೋಚನೆ ಮಾಡುತ್ತಿರುವಾಗ ಬಸ್ ಬಂದಿತು. ಬಸ್ ಹತ್ತಿ ಕೂತಳು, ,ಕ್ಷಣ ಮಾತ್ರದಲ್ಲಿ ಬಸ್ ತುಂಬಿ ಹೋಗಿತ್ತು.ಮುಂದಿನ 3-4 ಸ್ಟಾಪಿನಲ್ಲಿ ಇಳಿಯುವವರ ಟಿಕೆಟ್ ಹಣ ಪಡೆದು, ಬಸ್ ಸ್ವಲ್ಪ ಖಾಲಿಯಾದ ಮತ್ತೆ ಕುಳಿತವರ ಟಿಕೆಟ್ ಹಣಕ್ಕೆ ಕಂಡಕ್ಟರ್ ಬಂದಾಗ ತನ್ನ ಗೆಳತಿ ಮೊದಲೇ ಹೇಳಿದಂತೆ 15 ರೂಪಾಯಿ ಕೊಟ್ಟು ಕಾಲೇಜಿನ ಗುರುತಿನ ಚೀಟಿ ತೋರಿಸಿದಳು, ಅವನು ಏನು ಮಾತನಾಡದೇ ಮುಂದೆ ಹೋದ. ನಾಳಿನ ಮದುವೆ , ಅಲ್ಲಿ ತನ್ನ ಗೆಳತಿ ಹಾಗೂ ತಾನು ಮಾಡಲಿರುವ ತಲೆಹರಟೆ ಕೆಲಸಗಳು, ಅಣ್ಣನನ್ನು ಹೇಗೆಲ್ಲಾ ಕಾಡಬೇಕು ಎಂದು ಹಾಕಿದ ಯೋಜನೆಗಳು ಹೀಗೆ ನೂರೆಂಟು ಯೋಚನೆ ಇವಳಿಗೆ.ಅರ...

ಅಕ್ಕಿ ಕಾಳಿನ ಮೇಲೆ ಹೆಸರು ಬರೆದಳೆ ಸೀತು...?!

Image
ಉಣಗಲು ದಾಟಿ 5 ನಿಮಿಷ ನಡೆದುಕೊಂಡು ಹೋಗಬೇಕು ಅವನ ಅಜ್ಜನ ಮನೆ ತಲುಪಲು. ದಾರಿಯುದ್ದಕ್ಕೂ ಅರಳಿ ನಿಂತ ತರಾವರಿ ದಾಸವಾಳದ ಹೂಗಳು, ಅದರೊಂದಿಗೆ ಅಲ್ಲಿ ಅಲ್ಲಿ ಇರುವ ಗಂಧಸಾಲೆಯ ಪರಿಮಳ, ಹಕ್ಕಿಯ ಕೂಗು, ಅದರೊಂದಿಗೆ ಬರುವ ಬಾಲ್ಯದ ನೆನಪುಗಳು… ಇವನ್ನೆಲ್ಲ ಚಿಂತೆಗಳನ್ನು ಮರೆಸಿ ಮನೆ ತಲುಪುವಷ್ಟರಲ್ಲಿ ತುಸು ಸಮಾಧಾನ ಕೊಡುತ್ತಿತ್ತು. ಮನೆಗೆ ಹೋದರೆ ಅಲ್ಲಿ ಈಗ ಇರುವುದು ಅವನ ಸೀತು ಮಾತ್ರ. ಅವನು ಆರು ತಿಂಗಳ ಮಗುವಾಗಿದ್ದಾಗಿನಿಂದ ಅವನನ್ನು ನೋಡಿಕೊಂಡ ದೂರದ ಅತ್ತೆಯೇ ಹೌದು. ಮನೆ ತಲುಪಿದ ಕೂಡಲೇ ಬಿಸಿ ನೀರಿನ ಸ್ನಾನ, 100 ವರ್ಷ ಹಳೆಯ ಈ ಬಚ್ಚಲು ಮನೆಯಲ್ಲಿ ಸದಾಕಾಲ ಬಿಸಿ ನೀರಿನಿಂದ ತುಂಬಿರುವ ಪಳಪಳ ಹೊಳೆಯುವ ಹಂಡೆ, ಮಂದ ಬೆಳಕು, ಮೈ ಒರೆಸಿಕೊಳ್ಳಲು ಅವನ ಸೀತು ಕೊಡುತ್ತಿದ್ದ ಪರಿಮಳದ ಬೈರಾಸು—ಇವೆಲ್ಲ ಕೊಡುತ್ತಿದ್ದ ಕುಶಿ, ತನ್ನ ಪೇಟೆಯ ಮನೆಯ ಆಧುನಿಕ ತಂತ್ರಜ್ಞಾನದ ಬಚ್ಚಲು ಮನೆ ಕೊಡಲು ಸಾಧ್ಯವಿಲ್ಲ ಎಂದು ಅವನಿಗೆ ಅನಿಸುತ್ತಿತ್ತು. ಪ್ರತಿ 2/3 ತಿಂಗಳಿಗೊಮ್ಮೆ ಅಜ್ಜನ ಮನೆಗೆ ಬಂದು, ಅವನು ತೋಟದ ಕೆಲಸ ನೋಡಿಕೊಳ್ಳುತ್ತಿದ್ದ. ಪತ್ನಿ ಹಾಗೂ ಸೀತು ಹಲಸಿನ ಹಣ್ಣು ಕೊರೆದು, ಸೊಳೆಗಳನ್ನು ಬೇರ್ಪಡಿಸುವುದು, ಗೇರುಬೀಜ ಹುರಿಯುವುದು, ಪುನರ್ಪುಳಿ ಕೊಚ್ಚಿ ಬಿಸಿಲಿನಲ್ಲಿ ಒಣಗಿಸುವುದು, ಹಪ್ಪಳ, ಸಂಡಿಗೆ, ಬೆರಟ್ಟಿ, ಮಾಂಬ್ಳ, ಚಕ್ಕುಲಿ ಮುಂತಾದವುಗಳನ್ನು ಮಾಡುವುದು. ಸೀತುವಿಗೆ ಇದೀಗ 70 ವರ್ಷ ಕಳೆದಿದೆ, ಆದರೆ ಇನ್ನೂ 40–45ರ ಹಾಗೆ ಕಾಣುತ್...

ಆಶಯ

Image
   ದಿನವೂ ಬಸ್ಸಿಂದ ಇಳಿದು , ರಸ್ತೆ ದಾಟುವಾಗ ಕಣ್ಣುಗಳನ್ನು ಸಣ್ಣ ಮಾಡಿ , ದಯವಿಟ್ಟು ನಿಧಾನಿಸಿ ಎಂಬಂತೆ ಮುಖವನಿಟ್ಟು   ವೇಗವಾಗಿ ಹೋಗುವ ವಾಹನಗಳನ್ನು ನಿಲ್ಲುವಂತೆ ಮಾಡುವ ಪುಟ್ಟ ಪ್ರಯತ್ನ ಇವಳದು. ಒಂದು ವೇಳೆ ನಿಲ್ಲಿಸಿದರೆ , ಅವರ ದಿನಚರಿ ಅದ್ಭುತವಾಗಿರಲ ಎಂದು ಮನಸಾ ಪ್ರಾರ್ಥಿಸುವಳು .ಹೀಗೆ ಮಾಡಿದಾಗ ನಿಲ್ಲಿಸುತ್ತಿದ್ದ ವಾಹನಗಳು ಕೆಲವೇ ಕೆಲವು ಮಾತ್ರ. ರಸ್ತೆಯ ಇನ್ನೊಂದು ಕಡೆ ಇರುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಈಕೆ. ವಾಹನ ಚಲಾಯಿಸುತ್ತಿರುವ ಯಾರೇ ಇವಳನ್ನು ನೋಡುವ ವ್ಯವಧಾನ ತೋರಿದ್ದರೆ , ಶಾಲೆಗೆ ಹೋಗುವ ಮಗುವೇನೋ ಅಂದುಕೊಳ್ಳುವಂತಹ ಮುಗ್ಧ ಮುಖ ಇವಳದು.ಹೀಗೆ ಒಂದು ದಿನ ವಾಹನ ನಿಲ್ಲಿಸಿದ ಇವನಿಗೆ ಇವಳ ಮುಗ್ಧತೆ ತುಂಬಾ ಇಷ್ಟವಾಗಿತ್ತು. ಅಷ್ಟೇ ಅಲ್ಲದೆ ಆ ದಿನ ಅವನು ಕನಸಿನಲ್ಲಿಯೂ ಯೋಚಿಸಲು ಅಸಾಧ್ಯವಾದ ಒಂದೊಳ್ಳೆ ಬೆಳವಣಿಗೆ ಅವನ ವ್ಯವಹಾರದಲ್ಲಿ ಆಗಿತ್ತು.ಅಂದಿನಿಂದ ಪ್ರತಿನಿತ್ಯ ಆಕೆ ರಸ್ತೆ ದಾಟುವ ಸಮಯಕ್ಕೆ ಸರಿಯಾಗಿ ಅಲ್ಲಿ ತಲುಪುತ್ತಿದ್ದ. ಒಂದು ವೇಳೆ ಬೇಗ ತಲುಪಿದರು ಆಕೆಯ ಬರುವಿಕೆಗೆ ಕಾಯುತ್ತಿದ್ದ. ಆಕೆಯ ಮುಗ್ಧ ಮುಖ ಅವನಲ್ಲಿ ಸಮಾಧಾನ ತರುತ್ತಿತ್ತು. ಆಕೆ ತುಂಬು ಮನಸ್ಸಿನಿಂದ ಒಳ್ಳೆಯದು ಆಗಲೆಂದು ಹಾರೈಸಿದಂತೆ ಅನಿಸುತ್ತಿತ್ತು ಕೂಡ. ಅವಳಿಗೂ ಅದೆಷ್ಟು ರೂಢಿ ಆಗಿತ್ತು ಅಂದರೆ ಈಗೆಲ್ಲ ಮುಖವನ್ನು ಸಣ್ಣ ಮಾಡಿ ಸೀದ ರಸ್ತೆ ದಾಟಿ ಹೋಗುವಳ , ಕಿರು ನಗುವೊಂದನ್ನು   ಬೀರುತ್ತಾ. ಅಂದು ...

#48, ಸಿರಿ ದೇವ ಮತ್ತು ಗಾಜಿನ ಜಾಡಿಗಳು

Image
ಅದು ಮಬ್ಬುಗತ್ತಲೆಯ ಕೋಣೆ. ಇಡೀ ವಿದ್ಯಾರ್ಥಿ ನಿಲಯದಲ್ಲಿ ಹೆಚ್ಚಿನ ಸೌಲಭ್ಯ ಸಿಗುವ ಏಕೈಕ ಕೋಣೆ #48. ನನ್ನ ಅದೃಷ್ಟ—ಅಲ್ಲಿ ಸೇರಿಕೊಂಡೆ. ಅಲ್ಲಿ ಮೊದಲೇ ಬಿಡಾರ ಹೂಡಿದ್ದ ಸಿರಿ ದೇವಿ ನನಗೆ ಕೋಣೆಯ ವಿಶೇಷತೆಗಳನ್ನು ಹೇಳಿದಳು. ಕೋಣೆಯ ಒಂದು ಮೂಲೆ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿತ್ತು. ಹಾಗಾಗಿ ಅಲ್ಲಿ ಯಾರೂ ಜಾಂಡ ಊರುವ ಹಾಗಿರಲಿಲ್ಲ. ಇದರಿಂದ ಅಲ್ಲಿ ಇಬ್ಬರಿಗೆ ಮಾತ್ರ ಅವಕಾಶ—ಇದು ಮತ್ತಾವ ಕೋಣೆಯಲ್ಲೂ ಸಿಗದು. ಇನ್ನು ಹೀಗೆ ಮಳೆಯ ನೀರಿನಿಂದ ತುಕ್ಕು ಹಿಡಿದ ಕಂಬಿಯ ಕಿಟಕಿಯನ್ನು ಸ್ಲೈಡಿಂಗ್ ವಿಂಡೋವಾಗಿ ಮಾರ್ಪಾಟು ಮಾಡಿದ್ದರು. ಯಾವುದೋ ಖಾಸಗಿ ದ್ವೀಪದ, ಗಗನಚುಂಬಿ ವಸತಿಗೃಹದ ತುದಿಯ ಕೋಣೆಯ ಕಿಟಕಿಯಂತೆ ನಮಗೆ ಅನ್ನಿಸುತ್ತಿತ್ತು. ಅದಕ್ಕೆ ಕಾರಣ—ಈ ಕಿಟಕಿಯನ್ನು ತಳ್ಳಿದಾಗ ಆಕಾಶ, ಸಂಪೂರ್ಣ ಹಸಿರು ಮರಗಳು, ಪಕ್ಷಿಗಳು, ಅಳಿಲುಗಳು ಇವೆಲ್ಲ ಕಾಣಿಸುತ್ತಿದ್ದವು. ಮಾರ್ಗ ಬದಿಯಾಗಿರದ ಕಾರಣ ವಾಹನದ ಸದ್ದುಗದ್ದಲವೂ ಇರಲಿಲ್ಲ. ಒಟ್ಟಿನಲ್ಲಿ ನಮ್ಮ ಇಂದ್ರಲೋಕವೇ ಇದಾಗಿತ್ತು. ಸದಾ ನಗು-ಕುಶಿ; ಯಾವ ಚಿಂತೆಯೂ ಇಲ್ಲಿ ಇರಲಿಲ್ಲ. ಬಂದರೂ ಅವು ನೀರಿನ ಮೇಲಿನ ಗುಳ್ಳೆಗಳಂತೆ. ಬೆಳ್ಳಂಬೆಳಗ್ಗೆ ಎದ್ದು ಬಿಸಿನೀರು ಮಾಡುವ ಕೆಲಸ ನನಗಾದರೆ, ಅಂದಿನ ಧರಿಸುವ ಬಟ್ಟೆಗಳ ಇಸ್ತ್ರಿ ಕೆಲಸ ಸಿರಿಯದ್ದು. ಇನ್ನು ಮೆಸ್ಸಿನಲ್ಲಿ ಇಬ್ಬರಿಗೂ ತಿಂಡಿ ಬಡಿಸಿ ತರುವ ಕೆಲಸ ನನ್ನದು, ಮತ್ತು ನೀರಿನ ಕುಪ್ಪಿ ತುಂಬಿಸುವ ಕೆಲಸ ಸಿರಿಯದ್ದು. ಅಷ್ಟೇ ಅಲ್ಲ—ಬಸ್ಸಿನಲ್ಲಿ...